FILM
ಕುದುರೆ ಸವಾರಿ ವೇಳೆ ಬಿದ್ದು ಸಾವನಪ್ಪಿದ 2022ರ ಮಿಸ್ ಯೂನಿವರ್ಸ್ ಫೈನಲಿಸ್ಟ್

ಆಸ್ಟ್ರೇಲಿಯಾ ಮೇ 06: ಕುದುರೆ ಸವಾರಿ ವೇಳೆ ಕೆಳಗೆ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದು ಆಸ್ಟ್ರೇಲಿಯಾದ 23 ವರ್ಷದ ಮಾಡೆಲ್ ಸಿಯೆನ್ನಾ ವೀರ್ ದುರಂತ ಸಾವಿಗೀಡಾಗಿದ್ದಾರೆ.
ಏಪ್ರಿಲ್ 2ರಂದು ಆಸ್ಟ್ರೇಲಿಯಾದ ವಿಂಡ್ಸರ್ ಪೋಲೋ ಮೈದಾನದಲ್ಲಿ ಕುದುರೆ ಸವಾರಿ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಕುದುರೆ ನೆಲಕ್ಕುರುಳಿದೆ. ಕುದುರೆ ಮೇಲಿದ್ದ ಸಿಯೆನ್ನಾ ಸಹ ಕೆಳಗೆ ಬಿದ್ದಿದ್ದರು. ದಾಗಿ ಸುದೀರ್ಘ ನಾಲ್ಕು ವಾರಗಳ ಕಾಲ ಸಿಯೆನ್ನಾ ವೀರ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ, ಬದುಕುಳಿಯಲಿಲ್ಲ. ತಲೆಗೆ ಪೆಟ್ಟಾಗಿದ್ದರಿಂದ ಪ್ರಜ್ಞಾವಸ್ಥೆಯಲ್ಲಿದ್ದ ಸಿಯೆನ್ನಾಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗಿತ್ತು.

2022ರ ಆಸ್ಟ್ರೇಲಿಯನ್ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ 27 ಅಂತಿಮ ಸ್ಪರ್ಧಿಗಳಲ್ಲಿ ಸಿಯೆನ್ನಾ ವೀರ್ ಸಹ ಒಬ್ಬರು. ಮಾಡೆಲ್ ಸಿಯೆನ್ನಾ ವೀರ್ ಅವರ ಸಾವಿಗೆ ಅವರ ಆಪ್ತರು, ಮಾಡೆಲಿಂಗ್ ಕ್ಷೇತ್ರದ ಸ್ನೇಹಿತರು ಸೇರಿ ಅನೇಕರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.