LATEST NEWS
ಭಾರತ್ ಬಂದ್ ವೇಳೆ ಮಂಗಳೂರಿನಲ್ಲಿ ಕೆಲವು ಕಡೆ ಬಸ್ ಮೇಲೆ ಕಲ್ಲು ತೂರಾಟ
ಭಾರತ್ ಬಂದ್ ವೇಳೆ ಮಂಗಳೂರಿನಲ್ಲಿ ಕೆಲವು ಕಡೆ ಬಸ್ ಮೇಲೆ ಕಲ್ಲು ತೂರಾಟ
ಮಂಗಳೂರು ಸೆಪ್ಟೆಂಬರ್ 10: ಪೆಟ್ರೋಲ್ ಮತ್ತು ಡಿಸೆಲ್ ಬೇಲೆ ಏರಿಕೆ ವಿರುದ್ದ ಕಾಂಗ್ರೇಸ್ ಕರೆ ಕೊಟ್ಟಿರುವ ಭಾರತ್ ಬಂದ್ ಗೆ ಮಂಗಳೂರಿನಲ್ಲಿ ಕೆಲವು ಕಡೆ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿದೆ.
ಇಂದು ಮುಂಜಾನೆ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಹಾಗು ಕೆ ಎಸ್ ಆರ್ ಟಿ ಸಿ ಬಸ್ ಗೆ ಬಂಟ್ವಾಳದಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೂ ಹಾನಿಯಾಗಿಲ್ಲ, ಈ ನಡುವೆ ಪಂಪ್‌ವೆಲ್‌ನಿಂದ ಪಿವಿಎಸ್‌ನತ್ತ ತೆರಳುತ್ತಿದ್ದ ಬಸ್‌ಗೂ ಕಲ್ಲು ತೂರಾಟ ನಡೆಸಲಾಗಿದ್ದು, ಬಸ್ ನ್ನು ಗ್ಯಾರೇಜ್ ಗೆ ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಕಲ್ಲಡ್ಕದಲ್ಲಿ ಟೈರ್ ಹೊತ್ತಿಸಿ ಸಂಚಾರಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದವರನ್ನು ಚದುರಿಸಿ, ಉರಿಯುತ್ತಿದ್ದ ಟೈರ್ ಬೆಂಕಿಯನ್ನು ಪೋಲಿಸರು ನಂದಿಸಿದ್ದಾರೆ. ಕುಲಶೇಖರ್ ಬಳಿಯು ಟೈರ್ ಗೆ ಬೆಂಕಿ ಹತ್ತಿಸುವ ಯತ್ನವನ್ನು ವಿಫಲಗೊಳಿಸಿದ್ದಾರೆ.
ಮಂಗಳೂರಿನ ಕದ್ರಿ ಶಿವಭಾಗ್ ನಲ್ಲಿ ಹೊಟೇಲ್ ಗೆ ಕಲ್ಲು ತೂರಾಟ ನಡೆಸಿದ್ದಾರೆ. ಬೈಕಿನಲ್ಲಿ ಬಂದ ಹೆಲ್ಮೆಟ್ ಧರಿಸಿದ್ದ ವ್ಯಕ್ತಿ ಕಲ್ಲು ತೂರಿ ಓಡಿ ಹೋಗಿದ್ದಾನೆ. ಈ ದೃಶ್ಯ ಹೋಟೆಲ್ ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೂ ಹೊಟೇಲ್ ತೆರೆದಿಟ್ಟು ವ್ಯಾಪಾರ ಮುಂದುವರೆಸಿದ ಹೋಟೆಲ್ ಸಿಬ್ಬಂದಿ.
ಮುನ್ನೆಚ್ಚರಿಕಾ ಕ್ರಮವಾಗಿ ಹೆದ್ದಾರಿ ಉದ್ದಕ್ಕೂ ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.