Connect with us

KARNATAKA

ಬೆಂಗಳೂರು : ಗಗನಸಖಿಯ ಮುಟ್ಟಿ ರೇಟ್ ಕೇಳಲು ಹೋಗಿ ಕಂಬಿ ಎಣಿಸಿದ ವಿದೇಶಿ ಪ್ರಜೆ..!

ಮಾಲ್ಡೀವ್ಸ್‌ನಿಂದ ಬೆಂಗಳೂರಿಗೆ ಬರ್ತಿದ್ದ ಖಾಸಗಿ ವಿಮಾನಯಾನ ಸಂಸ್ಥೆಯ ವಿಮಾನದಲ್ಲಿ ಗಗನಸಖಿ ಜೊತೆ ಅಸಭ್ಯವಾಗಿ ವರ್ತಿಸಿದ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ.
ಬೆಂಗಳೂರು: ಮಾಲ್ಡೀವ್ಸ್‌ನಿಂದ ಬೆಂಗಳೂರಿಗೆ ಬರ್ತಿದ್ದ ಖಾಸಗಿ ವಿಮಾನಯಾನ ಸಂಸ್ಥೆಯ ವಿಮಾನದಲ್ಲಿ ಗಗನಸಖಿ ಜೊತೆ ಅಸಭ್ಯವಾಗಿ ವರ್ತಿಸಿದ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ.


ಮಾಲ್ಡೀವ್ಸ್ ಪ್ರಜೆ ವಿಮಾನದಲ್ಲಿ ಗಗನಸಖಿ ಬಳಿ ಬಿಯರ್​ ಹಾಗೂ ಗೋಡಂಬಿ ಕೇಳಿದ್ದಾನೆ.

ಸರ್ವ್​ ಮಾಡುವಾಗ 51 ವರ್ಷಗಳಿಂದ ನಿನ್ನಂತ ಹುಡುಗಿಯನ್ನು ಹುಡುಕುತ್ತಿದ್ದೇನೆ. ನಿನ್ನ ರೇಟ್ ಎಷ್ಟು? ಎಷ್ಟು ಡಾಲರ್ ಕೊಟ್ರೆ ನೀನು ಬರ್ತಿಯಾ ಎಂದು ಕೇಳಿದ್ದಾನೆ.

ನೂರು ಡಾಲರ್ ಕೊಟ್ರೆ ಸಾಕಾ ಇನ್ನು ಬೇಕಾ ಎಂದೆಲ್ಲಾ ಕೇಳಿದ್ದ ಈ ಕಿರಾತಕ ಅಕ್ರಂ ಅಹ್ಮದ್ (51) ನನ್ನು  ದೇವನಹಳ್ಳಿ ಪೊಲೀಸರು ಬಂಧಿಸಿ ಕಂಬಿ ಎಣಿಸುವಂತೆ ಮಾಡಿದ್ದಾರೆ.

ಘಟನೆ ವಿವರ :

ಆಗಸ್ಟ್ 18 ರಂದು ಮಾಲ್ಡೀವ್ಸ್‌ನಿಂದ ಬೆಂಗಳೂರಿಗೆ ಬರ್ತಿದ್ದ ಖಾಸಗಿ ವಿಮಾನಯಾನ ಸಂಸ್ಥೆಯ ವಿಮಾನದಲ್ಲಿ ಘಟನೆ ನಡೆದಿದೆ.

ಆತ ಕುಳಿತಿದ್ದ ಸೀಟ್​ ಬಳಿ ಬಂದ ಗಗನಸಖಿಯ ಮೈ ಮುಟ್ಟಿದ್ದಾನೆ ಅಲ್ಲದೆ ಬಿಯರ್​ ಹಾಗೂ ಗೋಡಂಬಿಯ ಹಣ ಕೇಳಲು ಹೋದ ಮತ್ತೊಬ್ಬ ಗಗನಸಖಿಯ ಬಳಿಯೂ ಅಸಭ್ಯವಾಗಿ ವರ್ತಿಸಿ ಕೆಟ್ದ್ದಾಟದಾಗಿ ನಡೆದುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ನೊಂದ ಗಗನಸಖಿ ಈ ಬಗ್ಗೆ ದೂರು ನೀಡಿದ್ದು ದೇವನಹಳ್ಳಿ ಇಂಟರ್‌ ನ್ಯಾಷನಲ್‌ ಏರ್‌ಪೋರ್ಟ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಲ್ಡೀವ್ಸ್​​ನ ಮಾಲೆಯಿಂದ ಬ್ಯುಸಿನೆಸ್ ಕ್ಲಾಸ್​​​ನಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡಿದ್ದ ಈತನನ್ನು ದೇವನಹಳ್ಳಿ ಏರ್‌ಪೋರ್ಟ್‌ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *