LATEST NEWS
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ – ಆರೋಪಿ ಅರೆಸ್ಟ್
ಕಾರ್ಕಳ ಸೆಪ್ಟೆಂಬರ್ 25: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸರುವ ಘಟನೆ ಕಾರ್ಕಳದಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಕಾರ್ಕಳದ ಬಂಗ್ಲೆಗುಡ್ಡೆ ನಿವಾಸಿ ಶಿವಮೊಗ್ಗ ಮೂಲದ ನಯಾಜ್ (26) ಎಂದು ಗುರುತಿಸಲಾಗಿದ್ದು, ಮೊಬೈಲ್ ಮೂಲಕ ಯುವತಿ ಜೊತೆಗೆ ಸಂಪರ್ಕ ಮಾಡಿ ಸಲುಗೆ ಬೆಳೆಸಿಕೊಂಡಿದ್ದ ನಯಾಜ್, ಯುವತಿಯನ್ನು ಬಲವಂತದಿಂದ ಲೈಂಗಿಕವಾಗಿ ಬಳಸಿಕೊಂಡಿದ್ದ ಆರೋಪಿಸಲಾಗಿದೆ. ನಿನ್ನೆ ಯುವತಿಗೆ ಕಾರ್ಕಳದ ಪತ್ತೊಂಜಿ ಕಟ್ಟೆ ಎಂಬಲ್ಲಿಗೆ ಬರುವಂತೆ ಹೇಳಿ ಹಲ್ಲೆ ನಡೆಸಿ ಬಾಲಕಿಯ ಮೊಬೈಲ್ ಕಸಿದು ಪರಾರಿಯಾಗಿದ್ದಾನೆ.
ನಯಾಜ್ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ ಯುವತಿ, ಯುವತಿಯ ದೂರಿನ ಮೇರೆಗೆ ಪೋಕ್ಸೋ ಕೇಸು ದಾಖಲಿಸಿ ಆರೋಪಿಯ ಬಂಧಿಸಲಾಗಿದೆ.
You must be logged in to post a comment Login