LATEST NEWS
11 ವರ್ಷದ ಬಾಲಕಿಯ ಮೇಲೆ ಆರು ಮಂದಿ ಅಪ್ರಾಪ್ತ ಬಾಲಕರಿಂದ ಸಾಮೂಹಿಕ ಅತ್ಯಾಚಾರ

ರಾಂಚಿ ಎಪ್ರಿಲ್ 24: ಆರು ಮಂದಿ ಅಪ್ರಾಪ್ತ ಬಾಲಕರು 11 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಜಾರ್ಖಂಡ್‍ನ ಖುಂಟಿ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರು 10 ರಿಂದ 15 ವರ್ಷದೊಳಗಿನ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮದುವೆ ಸಮಾರಂಭಕ್ಕೆಂದು ಬಾಲಕಿ ಪಕ್ಕದ ಹಳ್ಳಿಗೆ ಹೋಗಿದ್ದಳು. ಒಂದು ನೃತ್ಯ ಕಾರ್ಯಕ್ರಮದ ವೇಳೆ ಬಾಲಕಿ ಬಾಲಕರೊಂದಿಗೆ ಜಗಳವಾಡಿದ್ದಾಳೆ. ಮಧ್ಯರಾತ್ರಿ ಹೊತ್ತಿಗೆ ಆಕೆ ತನ್ನ ಇಬ್ಬರು ಸ್ನೇಹಿತರ ಜೊತೆಗೆ ಮನೆಗೆ ಹಿಂದಿರುಗುತ್ತಿದ್ದಾಗ, ಅವಳನ್ನು ಹಿಂಬಾಲಿಸಿಕೊಂಡು ಬಂದ ಹುಡುಗರು ಆಕೆಯನ್ನು ತಡೆದು ಏಕಾಂಗಿ ಸ್ಥಳಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಂತರ ಸ್ಥಳದಿಂದ ತಪ್ಪಿಸಿಕೊಂಡ ಬಾಲಕಿ ಮತ್ತು ಆಕೆಯ ಇಬ್ಬರು ಸ್ನೇಹಿತರು ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಬಾಲಕಿಯನ್ನು ಹುಡುಕುತ್ತಾ ಬಂದ ಪೋಷಕರನ್ನು ನೋಡಿ ಆರೋಪಿಗಳು ಪರಾರಿಯಾಗಿದ್ದಾರೆ.
ಇದೀಗ ಪೊಲೀಸರು ಈ ಕುರಿತಂತೆ ತನಿಖೆ ನಡೆಸುತ್ತಿದ್ದು, ಆರು ಆರೋಪಿಗಳನ್ನು ಬಂಧಿಸಿದ್ದಾರೆ.
