LATEST NEWS
ಹಿಂದೂ ಹೇಳಿಕೆ – ಜೆಡಿಎಸ್ ಮುಖಂಡ ಬೋಜೇಗೌಡರ ಮೇಲೆ ಮುಗಿ ಬಿದ್ದ ಕಾಂಗ್ರೇಸ್ ಮುಖಂಡರು

ಹಿಂದೂ ಹೇಳಿಕೆ – ಜೆಡಿಎಸ್ ಮುಖಂಡ ಬೋಜೇಗೌಡರ ಮೇಲೆ ಮುಗಿ ಬಿದ್ದ ಕಾಂಗ್ರೇಸ್ ಮುಖಂಡರು
ಮಂಗಳೂರು ಅಗಸ್ಟ್ 4: ಜೆಡಿಎಸ್ ಮುಖಂಡ ಬೋಜೇಗೌಡರ ಹೇಳಿಕೆ ಕಾಂಗ್ರೇಸ್ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದ್ದೆ. ಎಂಎಲ್ಸಿ ಬೋಜೇಗೌಡರ ಹೇಳಿಕೆ ವಿರುದ್ದ ಕಿಡಿಕಾರಿದ ಸಚಿವ ಯು.ಟಿ ಖಾದರ್ ಭೋಜೇಗೌಡ ಅವರ ಮಾತು ನಮಗೆ ಆಶ್ಚರ್ಯ ತಂದಿದೆ. ಅವರು ಈ ಜಿಲ್ಲೆಯವರಲ್ಲ. ಅವರಿಗೆ ವಾಸ್ತವ ತಿಳಿದಿಲ್ಲ ಎಂದು ಹೇಳಿದರು.
ಬೋಜೆಗೌಡ ಅವರು ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ . ಇನ್ನೊಂದು ಪಕ್ಷದ ಬಗ್ಗೆ ಮಾತನಾಡುವಾಗ ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂದು ಕುಟುಕಿದರು. ಕಾಂಗ್ರೆಸ್ ಎಲ್ಲಾ ಜಾತಿ,ಧರ್ಮ,ಮತ ಗಳನ್ನು ಒಗ್ಗುಡಿಸಿದ ಪಕ್ಷ. ಕಾಂಗ್ರೆಸ್ ಎಂದಿಗೂ ಜಾತಿ,ಧರ್ಮ , ಆಧಾರದ ಮೇಲೆ ಭೇದಭಾವ ಮಾಡಿಲ್ಲ ಎಂದರು.

ಇಂಥ ರಾಜಕೀಯ ಪ್ರೇರಿತ ಹೇಳಿಕೆಗಳು ಅವರಿಗೆ ಶೋಭೆ ತರುವಂಥದ್ದಲ್ಲ. ಅವರ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ತರುವಂತಿದೆ. ಇನ್ನೊಂದು ಪಕ್ಷದ ಬಗ್ಗೆ ಮಾತನಾಡುವಾಗ ಸರಿಯಾಗಿ ಆಲೋಚನೆ ಮಾಡಬೇಕು. ಅವರು ಪಕ್ಷ ಸಂಘಟನೆ ಮಾಡಬೇಕಾದರೆ ಜನರ ಪರವಾಗಿ ಕೆಲಸ ಮಾಡಲಿ. ಅದು ಬಿಟ್ಟು ಇಂಥ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಖಾದರ್ ಹೇಳಿದರು.