LATEST NEWS
ಉತ್ತಮ ಆಡಳಿತ ಕೊಡುವ ಮನೋಭಾವನೆ ಇದ್ದರೆ ಖಾತೆ ಕ್ಯಾತೆ ಬರುವುದಿಲ್ಲ – ಸಚಿವ ಅಂಗಾರ

ಉಡುಪಿ ಜನವರಿ 26: ರಾಜ್ಯಸರಕಾರದ ಸಚಿವ ಖಾತೆ ಹಂಚಿಕೆಯಲ್ಲಿ ಉಂಟಾಗುತ್ತಿರುವ ಗೊಂದಲ ಬಗ್ಗೆ ನೂತನ ಸಚಿವ ಎಸ್ . ಅಂಗಾರ ಪ್ರತಿಕ್ರಿಯೆ ನೀಡಿದ್ದು, ,ಸರಕಾರದಲ್ಲಿರುವ ಸಮಸ್ಯೆಗಳ ಅರಿತು ಸಚಿವಕು ಸರಕಾರಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಸಂಘಟನೆಯ ಅಡಿಯಲ್ಲಿ ಸಂಸ್ಕಾರ ಬೆಳೆದು ಬಂದವ , ಶಾಸಕನಾಗಿ ನನ್ನನು ಆರು ಅವಧಿಗೆ ಜನರು ಗೆಲ್ಲಿಸಿದ್ದಾರೆ. ಆದರೆ ಅಧಿಕಾರ ಹಿಂದೆ ಹೋಗಿಲ್ಲ. ಅಧಿಕಾರವೇ ನನ್ನ ಹಿಂದೆ ಬಂದಿದೆ. ಸರಕಾರದ ಒಳಗಿರುವ ಎಲ್ಲರಿಗೂ ಒಂದೇ ರೀತಿ ಆಲೋಚನೆ ಇರಬೇಕು, ನಮ್ಮ ಆಲೋಚನೆಯಲ್ಲಿ ವ್ಯತ್ಯಾಸ ಆದರೆ ರಾಜ್ಯಕ್ಕೆ ಸಮಸ್ಯೆ ಬರುತ್ತದೆ ಎಂದು ಅಸಮಾಧಾನಿತ ಸಚಿವರಿಗೆ ಎಸ್ ಅಂಗಾರ ಕಿವಿಮಾತು ಹೇಳಿದರು. ಉತ್ತಮ ಆಡಳಿತ ಕೊಡುವ ಮನೋಭಾವನೆ ಇದ್ದರೆ ಖಾತೆ ಕ್ಯಾತೆ ಬರುವುದಿಲ್ಲ ಎಂದು ಉಡುಪಿಯಲ್ಲಿ ಬಂದರು , ಮೀನುಗಾರಿಕೆ ಸಚಿವ ಎಸ್ ಅಂಗಾರ ಹೇಳಿದ್ದಾರೆ.
