LATEST NEWS
ಉಡುಪಿ ಗಣರಾಜ್ಯೋತ್ಸವ ಸಂಭ್ರಮಕ್ಕೆ ಮೂರು ವರ್ಷದ ಬಾಲೆಯಿಂದ ಮಿಷನ್ ಗನ್ ಭದ್ರತೆ
ಉಡುಪಿ ಜನವರಿ 26: ದೇಶದೆಲ್ಲಡೆ ಇಂದು 72ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಕೊರೊನಾ ಸಂಕಷ್ಟದ ನಡುವೆಯೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗಣರಾಜ್ಯೋತ್ಸವವನ್ನು ಸರಳ ರೀತಿಯಲ್ಲಿ ಆಚರಿಸಲಾಗಿದೆ.
ಉಡುಪಿ ಜಿಲ್ಲಾಡಳಿತ ವತಿಯಿಂದ 72ನೇ ಗಣರಾಜ್ಯೋತ್ಸವ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಆಚರಿಸಲ್ಪಟ್ಟಿತು. ಮೀನುಗಾರಿಕೆ ಬಂದರು ಸಚಿವ ಅಂಗಾರ ಧ್ವಜಾರೋಹಣ ಮಾಡಿದರು. ಇನ್ನು ಈ ಕಾರ್ಯಕ್ರಮದಲ್ಲಿ ಇಡೀ ಜಿಲ್ಲಾಡಳಿತದ ಕಾರ್ಯಕ್ರಮಕ್ಕೆ ಸೆಕ್ಯೂರಿಟಿ ಕೊಟ್ಟಂತೆ ಮೂರುವರೆ ವರ್ಷದ ಮಗು ಮಯೂರಿ ಮಷೀನ್ ಗನ್ ಹಿಡಿದು ಓಡಾಡಿದ್ದು ವಿಶೇಷವಾಗಿತ್ತು.
ಉಡುಪಿ ಜಿಲ್ಲಾಡಳಿತ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಎಲ್ಲರನ್ನು ಸೆಳೆದದ್ದು ಮೂರುವರೆ ವರ್ಷದ ಪೋರಿ ಮಯೂರಿ ಪ್ರಭು. ಆರ್ಮಿಯ ಯೂನಿಫಾರ್ಮ್ ನಲ್ಲಿ ಬಂದಿದ್ದ ಮಯೂರಿ, ಕೈಯಲ್ಲಿ ಮಷೀನ್ ಗನ್ ಕಂಡುಹಿಡಿದು ಸಭಾ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲೆ ಓಡಾಡಿದಳು.
ಧ್ವಜಾರೋಹಣ, ಪಥಸಂಚಲನ, ಸಭೆ ಸನ್ಮಾನ ಸಂದರ್ಭ ಮೈದಾನದಲ್ಲಿ ನಿಂತು ಎಲ್ಲವನ್ನೂ ವೀಕ್ಷಿಸಿದಳು. ಸಚಿವ ಎಸ್ ಅಂಗಾರ, ಡಿಸಿ ಜಿ ಜಗದೀಶ್ , ಎಸ್ ಪಿ ಶಾಸಕರು, ಎಲ್ಲಾ ಗಣ್ಯರಿಗೂ ಮಯೂರಿ ಗಣರಾಜ್ಯೋತ್ಸವದ ಶುಭ ಹಾರೈಸಿದ್ದಾಳೆ. ಮುಂದೆ ನೀನು ಪೊಲೀಸ್ ಆಗಿ ಎಲ್ಲರಿಗೂ ಭಧ್ರತೆ ಕೊಡು, ಸದ್ಯ ನಾವೇ ನಿನಗೆ ಸೆಕ್ಯೂರಿಟಿ ಕೊಡ್ತೇವೆ ಅಂತ ಎಂದು ಶುಭ ಹಾರೈಸಿದ್ದಾರೆ.