ಕಂಟೈನರ್ ಲಾರಿಯಲ್ಲಿ 100 ಕ್ಕೂ ಅಧಿಕ ವಲಸೆ ಕಾರ್ಮಿಕರು ಪತ್ತೆ

ಪುತ್ತೂರು ಮೇ.08:ಕಂಟೈನರ್ ಲಾರಿಯಲ್ಲಿ ನೂರಾರು ಬಿಹಾರ ಮೂಲದ ವಲಸೆ ಕಾರ್ಮಿಕರು ಪತ್ತೆಯಾದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶಿರಾಢಿಯಲ್ಲಿ ನಡೆದಿದೆ.

ಎರಡು ಕಂಟೈನರ್ ಲಾರಿಗಳಲ್ಲಿ 100 ಕ್ಕೂ ಅಧಿಕ ಬಿಹಾರ ಮೂಲದ ವಲಸೆ ಕಾರ್ಮಿಕರನ್ನು ಮಂಗಳೂರಿನಿಂದ ಬೆಂಗಳೂರಿಗೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು, ದಕ್ಷಿಣಕನ್ನಡ ಜಿಲ್ಲೆಯ ಶಿರಾಢಿ ಘಾಟ್ ಬಳಿ ವಾಹಾನ ತಪಾಸಣೆ ವೇಳೆ ಕಾರ್ಮಿಕ ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ.

ಸದ್ಯ ವಲಸೆ ಕಾರ್ಮಿಕರಿಗೆ ಗುಂಡ್ಯಾ ಬಳಿ ತಾತ್ಕಾಲಿಕ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಆದರೆ ಕಾರ್ಮಿಕರನ್ನು ಸ್ಥಳೀಯ ಶಾಲೆಗೆ ಸ್ಥಳಾಂತರಿಸುವುದಕ್ಕೆ ಸಾರ್ವಜನಿಕರ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪುತ್ತೂರು ಸಹಾಯಕ ಆಯುಕ್ತ ಭೇಟಿ ನೀಡಿದ್ದು, ಎಲ್ಲಾ ಕಾರ್ಮಿಕರನ್ನು ಸುಬ್ರಹ್ಮಣ್ಯ ಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.