ಕಂದಾಯ ಇಲಾಖೆ ಸಿಬ್ಬಂದಿಗಳನ್ನು ಕೊವಿಡ್ -19 ವಿಮೆ ಸೌಲಭ್ಯದಡಿ ಸೇರಿಸಲು ಒತ್ತಾಯ

ಪುತ್ತೂರು ಮೇ.08: ಕೋವಿಡ್-19 ವಿಮೆ ಸೌಲ್ಯಭ್ಯದಡಿ ಕಂದಾಯ ಇಲಾಖೆಯ ಸಿಬ್ಬಂದಿಗಳನ್ನೂ ಸೇರಿಸಲು ದಕ್ಷಿಣಕನ್ನಡ ಜಿಲ್ಲಾಧಿಕಾರಿಗೆ ಪತ್ರ ಮೂಲಕ ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ಮನವಿ ಮಾಡಿದ್ದಾರೆ.

ಕೊರೊನಾ ಸೊಂಕು ತಡೆ ಕಾರ್ಯಾಚರಣೆಯಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿಗಳು ಮುಂಚೂಣಿಯಲ್ಲಿದ್ದಾರೆ. ಕೊರೊನಾ ಹಿನ್ನಲೆ ಕ್ವಾರೈಂಟೈನ್ ಗೆ ಒಳಗಾದವರಿಗೆ ವಿವಿಧ ಸೌಲಭ್ಯವನ್ನು ಒದಗಿಸುವುದು, ವಲಸೆ ಕಾರ್ಮಿಕರನ್ನು ಗುರುತಿಸಿ ಆಯಾಯ ಊರಿಗೆ ಕಳುಹಿಸುವುದು. ಮುಂತಾದ ಜವಾಬ್ದಾರಿ ಕಂದಾಯ ಇಲಾಖೆಯದ್ದಾಗಿದೆ.

ಈ ಕಾರಣಕ್ಕಾಗಿ ಕಂದಾಯ ಇಲಾಖೆಯ ಸಿಬ್ಬಂದಿಗಳಿಗೂ ಜೀವ ವಿಮೆ ಸುರಕ್ಷತೆ ಬೇಕಿದ್ದು. ಸರಕಾರ ಗಮನಕ್ಕೆ ಈ ವಿಚಾರ ತರುವಂತೆ ಪತ್ರದಲ್ಲಿ ಒತ್ತಾಯ ಮಾಡಲಾಗಿದೆ.