Connect with us

  LATEST NEWS

  ಎಂಎಫ್ಸಿ ಸಂಸ್ಥೆಯ ನೂತನ ಶಾಖೆ ಮಂಗಳೂರು ಫರ್ಝಿ ಕೆಫೆ – ಫಳ್ನೀರ್ ಪ್ಯಾಲೇಸ್ ಕಟ್ಟಡದಲ್ಲಿ ಶುಭಾರಂಭ

  ಮಂಗಳೂರು ಜುಲೈ 07: ಎಂಎಫ್ಸಿ ಸಂಸ್ಥೆಯ ನೂತನ ಶಾಖೆ ಮಂಗಳೂರು ಫರ್ಝಿ ಕೆಫೆ, ಎಂಎಫ್ಸಿ ಬೊಂಡಾ ಮಾರ್ಟ್ ಮಂಗಳೂರಿನ ಫಳ್ನೀರ್ನ ಫಳ್ನೀರ್ ಪ್ಯಾಲೇಸ್ ಕಟ್ಟಡದಲ್ಲಿ ಶುಭಾರಂಭಗೊಂಡಿತು.


  ನೂತನ ಎಂಎಫ್ಸಿ ಮಂಗಳೂರು ಫರ್ಝಿ ಕೆಫೆ, ಎಂಎಫ್ಸಿ ಬೊಂಡಾ ಮಾರ್ಟ್ಗೆ ಗೋವಾ ರಾಜ್ಯಪಾಲರಾದ ಪಿ ಎಸ್ ಶ್ರೀಧರನ್ ಪಿಳ್ಳೈ ಭೇಟಿ ನೀಡಿ ಶುಭಹಾರೈಸಿದ್ರು…. ಬಳಿಕ ನೂತನ ಶಾಖೆಗೆ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಎಂಎಫ್ಸಿ ಸಂಸ್ಥೆ ಮಾಲಕ ಎಂಎಫ್ಸಿ ಸಿದ್ದೀಕ್, ಮಾಜಿ ಮೇಯರ್‌ ಅಶ್ರಫ್, ಎಸ್ಎಲ್ ಭಾರದ್ವಾಜ್ ಸೇರಿ ಚಾಲನೆ ನೀಡಿದರು….


  ಈ ವೇಳೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿದ ಅವರು ಮಂಗಳೂರಿನಲ್ಲಿ 2012 ರಲ್ಲಿ ಸ್ಥಾಪಿಸಿತವಾದ ಎಂಎಫ್ಸಿ ಸಂಸ್ಥೆ ಈಗಾ ಜಿಲ್ಲೆಯಲ್ಲೇ ಹೆಸರುವಾಸಿ ಸಂಸ್ಥೆಯಾಗಿದ್ದು ಇದೀಗಾ ಹತ್ತನೆಯ ಶಾಖೆಯನ್ನು ಆರಂಭಿಸಿದೆ. ಈ ಸಂಸ್ಥೆ ಜಿಲ್ಲೆಯ ಜನ್ರಿಗೆ ನೀಡುವ ಗುಣಮಟ್ಟದ ಸೇವೆಯೇ ಈ ಹಂತಕ್ಕೆ ಇವರನ್ನು ಬೆಳೆಸಿದೆ. ಮುಂದಿನ ದಿನಗಳಲ್ಲಿ ಈ ಎಂಎಫ್ಸಿ ಸಂಸ್ಥೆಯು ದೇಶದಾದ್ಯಂತ ಶಾಖೆ ತೆರೆಯುವಂತಾಗಲಿ ಎಂದು ಶುಭಹಾರೈಸಿದ್ರು….ಬಳಿಕ ಎಂಎಫ್ಸಿ ಸಂಸ್ಥೆ ಮಾಲಕ ಎಂಎಫ್ಸಿ ಸಿದ್ದೀಕ್ ಮಾತನಾಡಿ ಕಳೆದ ಹನ್ನೆರಡು ವರ್ಷಗಳಲ್ಲಿ ಸಂಸ್ಥೆಯು ಗುಣಮಟ್ಟದ ಸೇವೆ ನೀಡಿದೆ ಇದೀಗಾ ಹತ್ತನೆ ಶಾಖೆಗೆ ಗೋವಾ ರಾಜ್ಯಪಾಲರೇ ಚಾಲನೆ ನೀಡಿದ್ದಾರೆ.

  ಹತ್ತನೇ ಶಾಖೆ ಎಂಎಫ್ಸಿ ಮಂಗಳೂರು ಫರ್ಝಿ ಕೆಫೆಯಲ್ಲಿ ವಿವಿಧ ಚಿಕನ್ ಖಾದ್ಯಗಳು ಮತ್ತು ಬೊಂಡ ಮಾರ್ಟ್ ನಲ್ಲಿ ಊರಿನ ಶೈಲಿಯ ಎಳನೀರು, ಚರ್ಮುರಿ ಹೀಗೆ ಹತ್ತು ಹಲವು ಖಾದ್ಯಗಳು ಗ್ರಾಹಕರಿಗೆ ಗುಣಮಟ್ಟದಲ್ಲಿ ನೀಡಲಿದ್ದೇವೆ, ಮಾತ್ರವಲ್ಲದೆ ಶೀಘ್ರದಲ್ಲಿ ಎಂಎಫ್ಸಿ ಇನ್ನೆರಡು ಶಾಖೆ ನಗರದಲ್ಲಿ ಆರಂಭಗೊಳ್ಳಲಿದೆ. ಎಲ್ಲಾ ಶಾಖೆಗಳಿಗೆ ಗ್ರಾಹಕರು ಉತ್ತಮ ರೀತಿಯಲ್ಲಿ ಸಹಕಾರ ನೀಡಿದ್ದಾರೆ ಮುಂದೆಯು ಇದೇ ರೀತಿ ಸಹಕಾರ ನೀಡಲಿದ್ದಾರೆ ಎಂದವರು ಹೇಳಿದರು.

  Share Information
  Advertisement
  Click to comment

  You must be logged in to post a comment Login

  Leave a Reply