FILM
ಲೈವ್ ನಲ್ಲಿರುವಾಗಲೇ ಟಿಕ್ ಟಾಕ್ ಇನ್ಫ್ಲುಯೆನ್ಸರ್ನ ಗುಂಡಿಕ್ಕಿ ಹ**ತ್ಯೆ

ಮೆಕ್ಸಿಕೋ : ಸೋಶಿಯಲ್ ಮಿಡಿಯಾ ಟಿಕ್ ಟಾಕ್ ಇನ್ಫ್ಲುಯೆನ್ಸರ್ ಆಗಿರುವ ಯುವತಿಯನ್ನ ಆಕೆ ಲೈವ್ ಸ್ಟ್ರೀಮಿಂಗ್ ನಲ್ಲಿರುವಾಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ವ್ಯಾಲೆರಿಯಾ ಮಾರ್ಕೆಜ್ ಎಂಬುವವರು ಮೃತ ದುರ್ದೈವಿ. ಅವರು ಬ್ಯೂಟಿ ಸಲೂನ್ ಒಂದನ್ನು ನಡೆಸುತ್ತಿದ್ದರು. ಅಲ್ಲಿ ವ್ಯಾಲೆರಿಯಾ ಖುಷಿಯಿಂದ ಲೈವ್ಸ್ಟ್ರೀಮ್ ಮಾಡುತ್ತಿದ್ದರು. ಈ ವೇಳೆ ಸಲೂನ್ಗೆ ಎಂಟ್ರಿ ಕೊಟ್ಟ ಅನಾಮಧೇಯ ವ್ಯಕ್ತಿ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ. ಇದನ್ನು ನೋಡಿ ಅನೇಕರಿಗೆ ಶಾಕ್ ಆಗಿದೆ.

ಜಲಿಸ್ಕೊದ ಜಪೋಪಾನ್ ಪಟ್ಟಣದಲ್ಲಿರುವ ಬ್ಯೂಟಿ ಸಲೂನ್ ಬ್ಲಾಸಮ್ ದಿ ಬ್ಯೂಟಿ ಲೌಂಜ್‌ನಲ್ಲಿ ವಲೇರಿಯಾ ಮಾರ್ಕ್ವೆಜ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಮೃತ ಯುವಕಿ ಮಾರ್ಕ್ವೆಜ್ ಮೆಕ್ಸಿಕನ್ ಮಾಡೆಲ್ ಆಗಿದ್ದು, 2021 ರಲ್ಲಿ ಮಿಸ್ ರೋಸ್ಟ್ರೋ (ಮಿಸ್ ಫೇಸ್) ಸೌಂದರ್ಯ ಸ್ಪರ್ಧೆಯನ್ನು ಗೆದ್ದಿದ್ದರು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಸೌಂದರ್ಯಕ್ಕೆ ಸಂಬಂಧಿಸಿದಂತೆ ವಿಡಿಯೋಗಳನ್ನು ಮಾಡುತ್ತಿದ್ದರು ಎಂದು ಹೇಳಲಾಗಿದೆ.
ವ್ಯಾಲೆರಿಯಾ ಅವರು ಗೊಂಬೆಯನ್ನು ಇಟ್ಟುಕೊಂಡು ಆಟ ಆಡುತ್ತಿದ್ದರು. ಈ ವೇಳೆ ಅವರ ಹೊಟ್ಟೆಗೆ ಶೂಟ್ ಮಾಡಲಾಗಿದೆ. ಏನಾಗುತ್ತಿದೆ ಎಂದು ಗೊತ್ತಾಗುವುದರೊಳಗೆ ಅವರು ಅಸುನೀಗಿದ್ದಾರೆ. ಆ ಬಳಿಕ ಯಾರೋ ಒಬ್ಬರು ಅವರ ಮೊಬೈಲ್ ತೆಗೆದುಕೊಂಡು ಲೈವ್ಸ್ಟ್ರೀಮ್ನ ನಿಲ್ಲಿಸಿದ್ದಾರೆ. ಉಡುಗೊರೆ ಕೊಡೋ ನೆಪದಲ್ಲಿ ಬಂದ ವ್ಯಕ್ತಿ ಈ ಕೊಲೆ ಮಾಡಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವ್ಯಾಲೆರಿಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಈಗತಾನೇ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದರು. ಇನ್ಸ್ಟಾಗ್ರಾಮ್ ಹಾಗೂ ಟಿಕ್ಟಾಕ್ ಸೇರಿ ಅವರಿಗೆ 2 ಲಕ್ಷ ಹಿಂಬಾಲಕರು ಇದ್ದಾರೆ.
Did you guys hear or see this Mexican influencer, Valeria Marquez get killed during her live on IG?!
— Spicy Canela- ZoRiyadhSZN (@SpicyCanela_) May 16, 2025