LATEST NEWS
ಮಾದಕ ವಸ್ತು ಗಾಂಜಾ ಬಳಸಲು ಅವಕಾಶ; ಸಚಿವೆ ಮೇನಕಾ ಗಾಂಧಿ ಸಲಹೆ

ನವದೆಹಲಿ,ಜುಲೈ 31:ವೈದ್ಯಕೀಯ ಉದ್ದೇಶಗಳಿಗೆ ಮಾದಕ ವಸ್ತು ಗಾಂಜಾವನ್ನು ಬಳಸಲು ದೇಶದಲ್ಲಿ ಅವಕಾಶ ನೀಡಬೇಕು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಮೇನಕಾ ಗಾಂಧಿ ಸಲಹೆ ನೀಡಿದ್ದಾರೆ.
ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ‘ರಾಷ್ಟ್ರೀಯ ಮಾದಕ ವಸ್ತು ಬಳಕೆ ಕಡಿತ ನೀತಿ’ ಬಗೆಗಿನ ಸಂಪುಟ ಕರಡು ಟಿಪ್ಪಣಿಯ ಪರಿಶೀಲನೆ ನಡೆಸಿದ ಸಚಿವರ ತಂಡದ ಸಭೆಯಲ್ಲಿ ಅವರು ಈ ಸಲಹೆ ನೀಡಿದ್ದಾರೆ.ಸಭೆಯಲ್ಲಿ ನೀಡಲಾದ ಸಲಹೆಗಳ ಆಧಾರದಲ್ಲಿ ಕೆಲವು ಅಂಶಗಳನ್ನು ಮಾರ್ಪಾಡುಗೊಳಸಿ ಕರಡು ರಾಷ್ಟ್ರೀಯ ನೀತಿಗೆ ಸಚಿವರ ತಂಡ ಅನುಮೋದನೆ ನೀಡಿದೆ.ಅಮೇರಿಕಾದಂತಹ ಅಭಿವೃದ್ಧಿ ಹೊಂದಿದ ಕೆಲವು ರಾಷ್ಟ್ರಗಳಲ್ಲಿ ಗಾಂಜಾ ಬಳಕೆಯನ್ನು ಸಕ್ರಮಗೊಳಿಸಲಾಗಿದೆ.ಅಂತಿಮವಾಗಿ ಇದು ಮಾದಕ ವಸ್ತುಗಳ ದುರ್ಬಳಕೆಯನ್ನು ಕಡಿಮೆಗೊಳಿಸುತ್ತದೆ. ಭಾರತದಲ್ಲೂ ಈ ಸಾದ್ಯತೆಗಳ ಬಗ್ಗೆ ಪರಿಶೀಲಿಸಬೇಕು ಎಂದು ಮೇನಕಾ ಗಾಂಧಿ ಸಭೆಯಲ್ಲಿ ಹೇಳಿದ್ದಾರೆ.ಕ್ಯಾನ್ಸರ್ ಚಿಕಿತ್ಸೆಯಲ್ಲಿ ಗಾಂಜಾ ಮಹತ್ವದ ಪಾತ್ರ ವಹಿಸುತ್ತದೆ.ಹಾಗಾಗಿ ವೈದ್ಯಕೀಯ ಉದ್ದೇಶ ಕ್ಕೆ ಅದನ್ನು ಸಕ್ರಮ ಗೊಳಿಸಬೇಕು ಎಂದು ಅವರು ಅಭಿಪ್ರಾಯ ಪಟ್ಟಿದಾರೆ.
