Connect with us

  DAKSHINA KANNADA

  ವಿಟ್ಲ ಸಮೀಪ ಅನುಮಾನಾಸ್ಪದ ಕಾರು ಅವಘಡ, ಕಾರಿನಲ್ಲಿದ್ದವರು ಪರಾರಿ..ಉಗ್ರ ಚಟುವಟಿಕೆಗಳ ಶಂಕೆ..?

  ಪುತ್ತೂರು, ಜುಲೈ 31 : ದೆಹಲಿ ನೋಂದಾಯಿತ ಕಾರೊಂದು ಪುತ್ತೂರು ತಾಲೂಕಿನ ವಿಟ್ಲ ಸಮೀಪ ಅಪಘಾತಕ್ಕೀಡಾಗಿದ್ದು, ಕಾರಿನಲ್ಲಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ.

  ಕಳೆದ ತಡರಾತ್ರಿ ವಿಟ್ಲ ವೀರಕಂಬ – ಮಜ್ಜೋಣಿ – ಕೋಡಪದವು ಒಳ ರಸ್ತೆಯಲ್ಲಿ ಈ ಅಫಘಾತ ಸಂಭವಿಸಿದ್ದು,ಈ ಸಂದರ್ಭದಲ್ಲಿ ಕಾರಿನಲ್ಲಿದ್ದವರು ಕಾರನ್ನು ಬಿಟ್ಟು ಪರಾರಿಯಾಗಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಕಾರ್ ನಂಬ್ರ DL5cB6855 ದೆಹಲಿಯಲ್ಲಿ ರಿಜಿಸ್ರ್ರೇಷನ್ ಆಗಿದ್ದು ಜಸ್ ಜೀತ್ ಸಿಂಗ್ ಎಂಬವರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ. ಆದರೆ ದೆಹಲಿ ಮೂಲದ ಕಾರು ವಿಟ್ಲದಲ್ಲಿ ಸಂಚರಿಸುತ್ತಿದ್ದುದು ಯಾಕೆ ? ಕಾರಿನಲ್ಲಿದ್ದವರು ಯಾರು ? ಎಂಬ ಹಲವು ಪ್ರಶ್ನೆಗಳೊಂದಿಗೆ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.

  ಭಯೋತ್ಪದನಾ ಚಟುವಟಿಕೆಯ ನೆರಳಲ್ಲಿರುವ ಕೇರಳ ರಾಜ್ಯದ  ಗಡಿಭಾಗವಾದ ವಿಟ್ಲ ಪರಿಸರದಲ್ಲಿ ಭಯೋತ್ವದನಾ ಚಟುವಟಿಕೆಗಳನ್ನು ನಡೆಸಲು ಯೋಜನೆ ರೂಪಿಸಲಾಗಿತ್ತೇ ಎಂಬ ಸಂಶಯಗಳನ್ನು ಇದು ಹುಟ್ಟು ಹಾಕಿದ್ದು, ಪೋಲಿಸರ ತನಿಖೆಯಿಂದ ತಿಳಿದು ಬರಬೇಕಾಗಿದ್ದು, ಸ್ಥಳೀಯ ಪೋಲಿಸರು, ಗುಪ್ತಚಾರ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯಪ್ರವರ್ತವಾಗಿದ್ದು, ತನಿಖೆ ಚುರುಕುಗೊಂಡಿದೆ. ಕಾರಿನ ಅಸಲಿ ವಾರಿಸುದಾರನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಕಳವು ಮಾಡಿರುವ ಕಾರು ಇದಾಗಿರುವ ಸಾಧ್ಯತೆಗಳಿದ್ದು ಈ ಕಾರನ್ನ ಅಕ್ರಮ ಚಟುವಟಿಕೆಗಳಿಗೆ ಬಳಸಲಾಗಿತ್ತೇ ಎಂಬ ಅನುಮಾನ ಕೂಡ ದಟ್ಟಗೊಳ್ಳುತ್ತಿದೆ.

  Share Information
  Advertisement
  Click to comment

  You must be logged in to post a comment Login

  Leave a Reply