LATEST NEWS
ದೇಶದ ಅತೀ ಶ್ರೀಮಂತ ಯೂಟ್ಯೂಬರ್ ಈಕೆ…13 ವರ್ಷಗಳಲ್ಲಿ 40 ಕೋಟಿಗೂ ಅಧಿಕ ಹಣ ಸಂಪಾದನೆ
ದೆಹಲಿ ನವೆಂಬರ್ 08: ಯೂಟ್ಯೂಬ್ ಇಡೀ ಜಗತ್ತನ್ನೇ ಆಳುತ್ತಿದೆ. ಇದೀಗ ಯೂಟ್ಯೂಬರ್ ಗಳು ಕೂಡ ಯಾವುದೇ ಎಂಎನ್ ಸಿ ಕಂಪೆನಿಯಲ್ಲಿ ದುಡಿಯುವ ಸಿಬ್ಬಂದಿಗಳಿಗಿಂತ ಅಧಿಕ ಹಣವನ್ನು ಗಳಿಸುತ್ತಿದ್ದಾರೆ. ಕೆಲವು ಯೂಟ್ಯೂಬ್ ನ್ನೆ ನಂಬಿ ಜೀವನ ನಡೆಸುತ್ತಿದ್ದಾರೆ. ಬರೇ ಯೂಟ್ಯೂಬ್ ನಿಂದ ಕೋಟಿ ಗಟ್ಟಲೆ ಹಣವನ್ನು ಸಂಪಾದಿಸಬಹುದು ಎಂದು ಮಹಿಳೆಯೊಬ್ಬರು ತೋರಿಸಿಕೊಟ್ಟಿದ್ದಾರೆ. ಅಡುಗೆ ಚಾನೆಲ್ ಪ್ರಾರಂಭಿಸಿ ಭಾರತದ ನಂಬರ್ 1 ಶ್ರೀಮಂತ ಮಹಿಳಾ ಯೂಟ್ಯೂಬರ್ ಎಂದೆನಿಸಿಕೊಂಡಿರುವ ಮಹಿಳೆಯೊಬ್ಬರ ಯಶಸ್ಸಿನ ಕಥೆ.
ಇವರೇ ನಿಶಾ ಮಧುಲಿಕಾ 65 ವರ್ಷ ಪ್ರಾಯದ ಇವರು ಇದೀಗ ದೇಶದ ನವೆಂಬರ್ 1 ಶ್ರೀಮಂತ ಮಹಿಳಾ ಯೂಟ್ಯೂಬ ರ್, ತಿಂಗಳಿಂಗೆ ಲಕ್ಷಗಟ್ಟಲೆ ಆದಾಯವನ್ನು ಇವರು ಸಾಮಾಜಿಕ ಜಾಲತಾಣದಿಂದ ಪಡೆಯುತ್ತಿದ್ದಾರೆ. ಉತ್ತರ ಪ್ರದೇಶದ ಮಧ್ಯಮ ಕುಟುಂಬದಲ್ಲಿ ಜನಿಸಿದ ನಿಶಾ ಅವರು ತಮ್ಮ ಪದವಿ ಶಿಕ್ಷಣ ಮುಗಿಸಿ , ಶಿಕ್ಷಕರಾಗಿ ಹಲವು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದಾರೆ. ಮೊದಲಿನಿಂದಲೂ ಅಡುಗೆಯ ಆಸಕ್ತಿಯನ್ನು ಹೊಂದಿರುವ ಇವರು 2011 ರಲ್ಲಿ, ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು. ಸಣ್ಣ ಪುಟ್ಟ ಪಾಕವಿಧಾನಗಳ ಮೂಲಕ ಪ್ರಾರಂಭವಾದ ಈ ಚಾನೆಲ್ ಬೆಳೆಯಲು ಪ್ರಾರಂಭವಾಗುತ್ತಿದ್ದಂತೆ ಶಿಕ್ಷಕಿ ಕೆಲಸವನ್ನು ಬಿಟ್ಟು ಸಂಪೂರ್ಣವಾಗಿ ಇದರಲ್ಲಿ ತೊಡಗಿಸಿಕೊಂಡರು.
2020 ರಲ್ಲಿ ಅವರು ಯೂಟ್ಯೂಬ್‌ನಲ್ಲಿ 10 ಮಿಲಿಯನ್ ಅಂದರೆ 1ಕೋಟಿ ಚಂದಾದಾರರನ್ನು ಪಡೆದರು. ಯೂಟ್ಯೂಬ್ನಿಂದ ಇವರು ‘ಡೈಮಂಡ್ ಪ್ಲೇ ಬಟನ್’ ಅನ್ನು ಸಹ ಸಿಕ್ಕಿದೆ. ಇಂದು(2024ರಲ್ಲಿ) ಇವರ ಯೂಟ್ಯೂಬ್ ಚಾನೆಲ್ ಬರೋಬ್ಬರಿ 14.4 ಮಿಲಿಯನ್ ಅಂದರೆ ಸುಮಾರು 1.44 ಕೋಟಿ ಚಂದಾದಾರರನ್ನು ಹೊಂದಿದೆ.
ಇಂದು ಭಾರತದ ಶ್ರೀಮಂತ ಮಹಿಳಾ ಯೂಟ್ಯೂಬರ್ ಪಟ್ಟಿಯಲ್ಲಿ ನಿಶಾ ಮಧುಲಿಕಾ ಹೆಸರನ್ನು ಸೇರಿಸಲಾಗಿದೆ. ಅವರು ಯೂಟ್ಯೂಬ್‌ನಲ್ಲಿ ಮಾತ್ರವಲ್ಲದೆ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿಯೂ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದಾರೆ. ಇನ್ನು ನಿಶಾ ಅವರ ನಿವ್ವಳ ಮೌಲ್ಯದ ಬಗ್ಗೆ ಹೇಳುವುದಾದರೆ, ಇಂದು ಅವರು ತಮ್ಮ ಅಡುಗೆ ಚಾನೆಲ್ ಮೂಲಕ 13 ವರ್ಷಗಳಲ್ಲಿ 43 ಕೋಟಿ ರೂಪಾಯಿ ಹಣ ಗಳಿಸಿದ್ದಾರೆ.
2016 ರಲ್ಲಿ, ದಿ ಎಕನಾಮಿಕ್ ಟೈಮ್ಸ್ ನಿಶಾ ಮಧುಲಿಕಾ ಅವರನ್ನು ಭಾರತದ ಟಾಪ್ 10 ಯೂಟ್ಯೂಬ್ ಸೂಪರ್‌ಸ್ಟಾರ್‌ಗಳ ಪಟ್ಟಿಯಲ್ಲಿ ಸೇರಿಸಿತು. ಇದರ ನಂತರ ವೊಡಾಫೋನ್‌ನ ವುಮೆನ್ ಆಫ್ ಪ್ಯೂರ್ ವಂಡರ್ ಕಾಫಿ ಟೇಬಲ್ ಪುಸ್ತಕದಲ್ಲಿ ಇವರ ಸಾಧನೆಗಳ ಬಗ್ಗೆ ಪ್ರಕಟವಾಯಿತು.
You must be logged in to post a comment Login