FILM
ಗನ್ ಹಿಡಿದು ದೇಶ ರಕ್ಷಣೆಗೆ ನಿಂತ ಉಕ್ರೇನ್ ಮಾಡೆಲ್…!!

ಕೀವ್: ಉಕ್ರೇನ್ ರಷ್ಯಾ ನಡುವೆ ನಡೆಯುತ್ತಿರುವ ಯುದ್ದ ದಿನದಿಂದ ದಿನಕ್ಕೆ ಭೀಕರತೆ ಪಡೆಯುತ್ತಿದ್ದು, ರಷ್ಯಾದ ಬಲಾಡ್ಯ ಸೇನೆ ಎದುರು ಇದೀಗ ಉಕ್ರೇನ್ ನಾಗರೀಕರು ಯುದ್ದಕ್ಕೆ ಇಳಿದಿದ್ದಾರೆ. ಉಕ್ರೇಮ್ ಅಧ್ಯಕ್ಷ ವ್ಲಾಡಿಮಿರ್ ಝೆಲನ್‍ಸ್ಕಿ ಅವರು ದೇಶ ರಕ್ಷಣೆಯಲ್ಲಿ ಪಾಲ್ಗೊಳ್ಳಿ ಎನ್ನುವ ಕರೆ ನೀಡಿದ ಹಿನ್ನೆಲೆಯಲ್ಲಿ ಮಿಸ್ ಉಕ್ರೇನ್ ದೇಶ ರಕ್ಷಣೆಗೆ ಗನ್ ಹಿಡಿದು ನಿಂತಿದ್ದಾರೆ.
ಮಿಸ್ ಉಕ್ರೇನ್ ಆಗಿರುವ ಅನಾಸ್ತೀನಾ ಲೀನಾ ಅವರು 2015ರಲ್ಲಿ ಮಿಸ್ ಗ್ರ್ಯಾಂಡ್ ಇನ್‍ಟರ್‌ನ್ಯಾಷನಲ್ ಬ್ಯೂಟಿ ಸ್ಪರ್ಧೆಯಲ್ಲಿ ಗೆದ್ದಿದ್ದರು. ಇದೀಗ ದೇಶ ರಕ್ಷಣೆ ಮಾಡಲು ಉಕ್ರೇನ್ ಸೈನ್ಯವನ್ನು ಸೇರಿಕೊಂಡಿದ್ದಾರೆ. ಕೈಯಲ್ಲಿ ಗನ್ ಹಿಡಿದು, ಸಮವಸ್ತ್ರವನ್ನು ಧರಿಸಿ ನಿಂತಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅನಾಸ್ತೀನಾ ಲೀನಾ ಉಕ್ರೇನ್ ಸೇನೆ ಸೇರುತ್ತಿದ್ದಂತೆ ಉಕ್ರೇನ್ ಮೇಯರ್ ವಿಟಾಲಿ ಕ್ಲಿಟ್ಸ್ಚ್ಕೋ ಕೂಡಾ ಸೇನೆಗೆ ಸೇರ್ಪಡೆಗೊಂಡಿದ್ದಾರೆ.
ಉಕ್ರೇನ್ ಉಳಿವಿಗಾಗಿ ಮಹಿಳೆಯರು ಅಖಾಡಕ್ಕಿಳಿದಿದ್ದಾರೆ. ಉಕ್ರೇನ್ ಉಪಾಧ್ಯಕ್ಷ ಸ್ಟೀಫನ್ ಕುಬಿವ್ ಪತ್ನಿ ಸೇರಿದಂತೆ 36 ಸಾವಿರಕ್ಕೂ ಹೆಚ್ಚು ಮಹಿಳಾ ಯೋಧರು ಇದ್ದಾರೆ.