Connect with us

    LATEST NEWS

    ಗಾಳಿಪಟ ಉತ್ಸವಕ್ಕೆ ರೆಡಿಯಾಗುತ್ತಿದೆ ಪಂಪ್ ವೆಲ್ ಪ್ಲೈಓವರ್

    ಗಾಳಿಪಟ ಉತ್ಸವಕ್ಕೆ ರೆಡಿಯಾಗುತ್ತಿದೆ ಪಂಪ್ ವೆಲ್ ಪ್ಲೈಓವರ್

    ಮಂಗಳೂರು ನವೆಂಬರ್ 19: ಕಳೆದ 10 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಪಂಪ್ ವೆಲ್ ಪ್ಲೈಓವರ್ ವಿರುದ್ದ ವಿಡಂಭನಾತ್ಮಕ ಪ್ರತಿಭಟನೆಗಳು ಮುಂದುವರಿದಿದೆ. ಈಗಾಗಲೇ ಸತತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿರುವ ಈ ಪಂಪ್ ವೆಲ್ ಪ್ಲೈಓವರ್ ನ ಕಾಮಗಾರಿ, ಈಗ ಮತ್ತೊಂದು ರೀತಿಯ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದೆ.

    ಮಂಗಳೂರಿನ ಸಿವಿಕ್ ಗ್ರೂಪ್ ಪಂಪ್ ವೆಲ್ ಪ್ಲೈಓವರ್ ನಲ್ಲಿ ಇದೆ ನವೆಂಬರ್ 24 ರಂದು ಗಾಳಿಪಟ ಕ್ಯಾಂಪೇನ್ ಆಯೋಜಿಸಲು ಮುಂದಾಗಿದೆ. ಮಂಗಳೂರಿನ ಸಿವಿಕ್ ಗ್ರೂಪ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ನವೆಂಬರ್ 24 ರಂದು ಸಂಜೆ 5 ಗಂಟೆಯಿಂದ ಸಾರ್ವಜನಿಕರು ತಮ್ಮ ವಿವಿಧ ವಿಭಿನ್ನವಾದ ಗಾಳಿಪಟಗಳನ್ನು ತಂದು ಪ್ಲೈಓವರ್ ಮೇಲೆ ನಿಂತು ಹಾರಿಸಬಹುದಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳಿಗೆ ಸಂಸದರಿಗೆ ಕಾಮಗಾರಿ ಆದಷ್ಟು ಬೇಗ ಮುಗಿಸಬೇಕೆಂಬ ಒತ್ತಾಯ ಮಾಡುವ ಉದ್ದೇಶದಿಂದ ಗಾಳಿ ಹಾರಿಸಲಾಗುತ್ತಿದೆ.

    ಪಂಪ್ ವೆಲ್ ಪ್ಲೈಓವರ್ ಗೆ ಈಗಾಗಲೇ 8 ಸಲ ಗಡುವು ನೀಡಿದರೂ ಕಾಮಗಾರಿ ಮುಗಿಸಲು ಸಾಧ್ಯ ಆಗಿರಲಿಲ್ಲ. ಜಿಲ್ಲೆಯ ಜನರ ತಾಳ್ಮೆಯನ್ನು ಜನಪ್ರತಿನಿಧಿಗಳು ಈ ಕಾಮಗಾರಿ ಮೂಲಕ ಪರೀಕ್ಷಿಸುತ್ತಿದ್ದು, ಪ್ರತಿಸಲ ಸಂಸದರ ಕಾಮಗಾರಿ ವೀಕ್ಷಣೆ ನಂತರ ಗಡುವು ಮಾತ್ರ ನೀಡಲಾಗುತ್ತಿದ್ದು, ಕಾಮಗಾರಿ ಮುಂದುವರೆಯುತ್ತಿಲ್ಲ ಎಂಬ ಆಕ್ರೋಶ ಕೂಡ ವ್ಯಕ್ತವಾಗಿದೆ. ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಟ್ರೋಲ್ ಆಗಿರುವ ಈ ಪಂಪ್ ವೆಲ್ ಈ ಬಾರಿ ಜನವರಿಗೆ ಉದ್ಘಾಟನಗೊಳ್ಳಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದು, ಆದರೆ ಕಾಮಗಾರಿ ಇಂಜಿನಿಯರ್ ಗಳ ಪ್ರಕಾರ ಇದು ಅಸಾಧ್ಯ ಎಂದು ಹೇಳಲಾಗುತ್ತಿದೆ.

    ಈ ಹಿನ್ನಲೆಯಲ್ಲಿ ಪಂಪ್ ವೆಲ್ ಪ್ಲೈಓವರ್ ನಲ್ಲಿ ಗಾಳಿ ಪಟ ಹಾರಿಸುವ ಮೂಲಕ ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸ ಮಾಡಲಿದೆ ಮಂಗಳೂರು ಸಿವಿಕ್ ಗ್ರೂಪ್.

    Share Information
    Advertisement
    Click to comment

    Leave a Reply

    Your email address will not be published. Required fields are marked *