Connect with us

  DAKSHINA KANNADA

  ಮೇಯರ್ ಕವಿತಾ ಸನಿಲ್ ವಾರ್ನಿಂಗ್ ಮುಷ್ಕರ್ ವಾಪಾಸ್

  ಮಂಗಳೂರು ಅಗಸ್ಟ್ 18 : ಸಮರ್ಪಕವಾಗಿ ವೇತನ ನೀಡದಿರುವುದನ್ನು ಖಂಡಿಸಿ ಮಹಾನಗರ ಪಾಲಿಕೆ ತ್ಯಾಜ್ಯ ಸಂಗ್ರಹಿಸುತ್ತಿರುವ ಆ್ಯಂಟನಿ ವೇಸ್ಟ್ ಕಂಪೆನಿ ಹೊರಗುತ್ತಿಗೆ ಪೌರಕಾರ್ಮಿಕರು ಬುಧವಾರ ಆರಂಭಿಸಿದ ಮುಷ್ಕರವನ್ನು ವಾಪಸ್ ಪಡೆದಿದ್ದಾರೆ.

  ಕುಳೂರು ಬಳಿಯ ಕಂಪೆನಿಯ ಯಾರ್ಡ್ ನಲ್ಲಿ ಎಲ್ಲ ಕಾರ್ಮಿಕರು ಜಮಾಯಿಸಿ ಪ್ರತಿಭಟನೆ ನಡೆಸಿದ್ದರು ಕಸ ಸಂಘ ಸಾಗಣೆಯ ವಾಹನಗಳನ್ನು ಯಾರ್ಡ್  ನಲ್ಲಿ ನಿಲ್ಲಿಸಿದ್ದ ಸುಮಾರು 650 ಕ್ಕೂ ಅಧಿಕ ಕಾರ್ಮಿಕರು ಕೆಲಸ ನಿರ್ವಹಿಸದೇ ಮನೆಗೆ ವಾಪಸ್ಸಾಗಿದ್ದರು. ಪರಿಣಾಮವಾಗಿ ನಗರಾದ್ಯಂತ ಕಳೆದ ಎರಡು ದಿನಗಳಿಂದ ಕಸ ಸಂಗ್ರಹ ನಡೆದಿರಲಿಲ್ಲ ಹೆಚ್ಚಿನ ಮನೆಯ ಆವರಣ ಗೋಡೆ ಗೇಟ್ ಗಳಲ್ಲಿ ರಸ್ತೆ ಬದಿಗಳಲ್ಲಿ ಕಸದ ರಾಶಿಗಳು ರಾಶಿ ಬಿದ್ದಿದ್ದು, ರಸ್ತೆ ಬದಿಯಲ್ಲಿ ಅಂಗಡಿಗಳ ಎದುರು ಕಸದ ರಾಶಿ ಹಾಗೆಯೇ ಇತ್ತು.

  ಪಾಲಿಕೆ ಮುಖ್ಯ ಸಚೇತಕ ಆರೋಗ್ಯ ಅಧಿಕಾರಿಗಳು ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರ ಸಮಸ್ಯೆ ಇತ್ಯರ್ಥಗೊಳಿಸಲು ಪ್ರಯತ್ನಿಸಿದ್ದರು. ಆದರೆ ಪ್ರಯತ್ನ ಯಾವುದೇ ಪರಿಣಾಮ ಬೀರದ ಬರದ ಹಿನ್ನೆಲೆಯಲ್ಲಿ ಮಂಗಳೂರು ಮೇಯರ್ ಕವಿತಾ ಸನಿಲ್, ಆಯುಕ್ತರು ಹಾಗೂ ಸಂಬಂಧಪಟ್ಟವರಿಗೆ ಕರೆ ಮಾಡಿ ಕೂಡಲೇ ಕಂಪೆನಿಯವರು ಕಸ ಸಂಗ್ರಹಿಸಬೇಕು ಇಲ್ಲವಾದರೆ ತುರ್ತಾಗಿ ಹಳೆಯ ಗುತ್ತಿಗೆದಾರರನ್ನು ಕಸ ಹಾಗೂ ತ್ಯಾಜ್ಯ ಸಂಗ್ರಹಿಸಲಾಗುತ್ತದೆ ಎಂದು ಎಚ್ಚರಿಸಿದ್ದರು.

  ಈ ಎಚ್ಚರಿಕೆಯ ಹಿನ್ನೆಲೆಯಲ್ಲಿ ಸಂಸ್ಥೆಯವರು ಬಹುತೇಕ ಕಾರ್ಮಿಕರಿಗೆ ತುರ್ತಾಗಿ ಸಂಬಳ ಪಾವತಿಸಿ ಕಸ ಸಂಗ್ರಹಕ್ಕೆ ಸೂಚಿಸಿದ್ದಾರೆ. ಇದರಂತೆ ನಿನ್ನೆಯಿಂದ ಕಸ ಸಂಗ್ರಹ ಆರಂಭವಾಗಿದ್ದು ಪೂರ್ಣ ಪ್ರಮಾಣದಲ್ಲಿ ಕಸ ಸಂಗ್ರಹಕ್ಕೆ ಇವತ್ತು ಒಂದು ಇಡೀ ದಿನ ಬೇಕಾಗಬಹುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply