LATEST NEWS
ಕೋಟ ಪತ್ರದ ಬೆನ್ನಲ್ಲೆ ಮತ್ಯಗಂಧ ರೈಲಿನ ಎಸಿ ಬೋಗಿಯ ಮೇಲ್ಚಾವಣಿ ಕುಸಿತ
ಮಂಗಳೂರು ಅಗಸ್ಟ್ 18: ಮಂಗಳೂರು ಮುಂಬೈಯ ಪ್ರಯಾಣಿಕರ ಪ್ರಮುಖ ಕೊಂಡಿಯಾಗಿರುವ ಮತ್ಸ್ಯಗಂಧಾ ಎಕ್ಸ ಪ್ರೆಸ್ ರೈಲಿನ ಎಸಿ ಬೋಗಿಯೊಂದರ ಮೇಲ್ಚಾವಣಿ ಕುಸಿತವಾಗಿದ್ದು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂಗಳೂರು-ಮುಂಬೈ ಮತ್ಸ್ಯಗಂಧಾ ಎಕ್ಸ್ಪ್ರೆಸ್ನ ಬೋಗಿಗಳನ್ನು ಮೇಲ್ದರ್ಜೆಗೇರಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಿದ ಒಂದು ವಾರದ ನಂತರ ಈ ಘಟನೆ ನಡೆದಿದೆ.
ಮಂಗಳೂರು ಮುಂಬೈ ಸಂಪರ್ಕಿಸುವ ಪ್ರಮುಖ ರೈಲು ಮತ್ಯಗಂಧವಾಗಿದ್ದು, ಕಳೆದ 26 ವರ್ಷಗಳಿಂದ ಸೇವೆ ನೀಡುತ್ತಿದೆ. ಅತೀ ಹೆಚ್ಚು ಪ್ರಯಾಣಿಕರನ್ನು ಈ ರೈಲು ಕೊಂಡೊಯ್ದರು, ಈ ರೈಲಿನ ಬೋಗಿಗಳು ಮಾತ್ರ ಇನ್ನೂ ಹಳೆಯದ್ದೇ ಆಗಿದೆ. ಈಗಾಗಲೇ ಹಲವು ಬಾರಿ ಪ್ರಯಾಣಿಕರುಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ, ಇದೀಗ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮತ್ಸ್ಯಗಂಧಾ ಎಕ್ಸ್ಪ್ರೆಸ್ನ ಬೋಗಿಗಳನ್ನು ಮೇಲ್ದರ್ಜೆಗೇರಿಸುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ.
#REALWARFIGHTER brigadier I N Rai ‘ದೇಶಕ್ಕಾಗಿ ತ್ಯಾಗ ಮಾಡಿದವರ ಮುಂದೆ ನಾನು ಕಿರಿಯ’…! episode 1
ಎಸಿ ಕೋಚ್‌ನ ಮೇಲ್ಛಾವಣಿ ಕುಸಿತದ ಬಗ್ಗೆ ಮಾಹಿತಿ ಕೋರಿದ ಕೋಟ ಶ್ರೀನಿವಾಸ್ ಪೂಜಾರಿ ಅವರು ಆದಷ್ಟು ಬೇಗ ದಕ್ಷಿಣ ರೈಲ್ವೆ ಮತ್ತು ಕೇಂದ್ರ ರೈಲ್ವೇ ಸಚಿವರ ಗಮನಕ್ಕೆ ತಂದು ಕೋಚ್‌ಗಳನ್ನು ಬದಲಾಯಿಸಿ ಎಲ್‌ಎಚ್‌ಬಿ ಕೋಚ್‌ಗಳನ್ನು ನೀಡುವುದಾಗಿ ಭರವಸೆ ನೀಡಿದರು. ಇನ್ನು ಈ ಮಧ್ಯೆ ಮತ್ಸ್ಯಗಂಧದ ಎಸಿ ಕೋಚ್‌ನ ಮೇಲ್ಛಾವಣಿ ಕುಸಿದಿರುವುದು ಹಾಗೂ ಕೋಟ ಶ್ರೀನಿವಾಸ್ ಪೂಜಾರಿ ಅವರು ಆಗಸ್ಟ್ 23 ರಂದು ಸಲ್ಲಿಸಿದ ಪತ್ರವನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.