LATEST NEWS
ಕೇರಳ ಸ್ಥಳೀಯ ಉತ್ಸವದಲ್ಲಿ ಹಮಾಸ್ ನಾಯಕರ ಭಾವಚಿತ್ರ ಪ್ರದರ್ಶನ

ಪಾಲಕ್ಕಾಡ್ ಫೆಬ್ರವರಿ 18: ಪಾಲಕ್ಕಾಡ್ ನಲ್ಲಿ ನಡೆದ ಸ್ಥಳೀಯ ಉತ್ಸವವೊಂದರ ವೇಳೆ ಆನೆಯ ಮೇಲೆ ಕುಳಿತ ವ್ಯಕ್ತಿಗಳು ಹಮಾಸ್ ನಾಯಕರ ಭಾವಚಿತ್ರವನ್ನು ಪ್ರದರ್ಶಿಸಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.

ತ್ರಿಫಲಾ ಉತ್ಸವದ ಮೆರವಣಿಗೆ ವೇಳೆ ಯುವಕರು ಆನೆಯ ಮೇಲೆ ಹಮಾಸ್ ನಾಯಕರ ಭಾವಚಿತ್ರವಿರುವ ಬ್ಯಾನರ್ ಪ್ರದರ್ಶನ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಈ ರೀತಿಯ ಬ್ಯಾನರ್ ಪ್ರದರ್ಶಿಸುವುದು ಎಷ್ಟು ಸರಿ ಎಂದು ಆಯೋಜಕರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Continue Reading