Connect with us

    LATEST NEWS

    ನಾಗಾಲ್ಯಾಂಡ್ – ಕಾರಿನ ಮೇಲೆ ಬಿದ್ದ ಬೃಹತ್ ಬಂಡೆ…ಇಬ್ಬರು ಸಾವು..ವಿಡಿಯೋ ವೈರಲ್

    ಕೋಹಿಮಾ ಜುಲೈ 05: ಬೃಹತ್ ಬಂಡೆಯೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಕಾರಿನ ಮೇಲೆ ಬಿದ್ದು ಇಬ್ಬರು ಸಾವನಪ್ಪಿದ ಘಟನೆ ನಾಗಾಲ್ಯಾಂಡ್ ನ ಕೊಹಿಮಾ-ದಿಮಾಪುರ್ ರಾಷ್ಟ್ರೀಯ ಹೆದ್ದಾರಿಯ ಪೊಲೀಸ್ ಚೆಕ್‌ಪೋಸ್ಟ್ ಬಳಿಯ ಚುಮೌಕೆಡಿಮಾದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.


    ಘಟನೆಯ ವೈರಲ್ ವೀಡಿಯೊದಲ್ಲಿ ಬೃಹತ್ ಬಂಡೆಯು ಒಂದರ ನಂತರ ಒಂದರಂತೆ ಎರಡು ಕಾರುಗಳನ್ನು ಹೊಡೆಯುವುದನ್ನು ತೋರಿಸುತ್ತದೆ. ಎರಡೂ ಕಾರುಗಳು ನಜ್ಜುಗುಜ್ಜಾಗಿದ್ದು, ಗಂಭೀರ ಹಾನಿಯಾಗಿದೆ. ಎರಡು ಕಾರುಗಳ ಮುಂದೆ ಮತ್ತೊಂದು ಬಂಡೆಯು ಕಾರಿಗೆ ಅಪ್ಪಳಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಕಾರು ಎಡಭಾಗದಲ್ಲಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.


    ಗಾಯಗೊಂಡವರು ದಿಮಾಪುರದ ರೆಫರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply