LATEST NEWS
ಬಕ್ರಿದ್ ಹಬ್ಬದಂದು ಮಂಗಳೂರಿನ ಈದ್ಗಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಇಲ್ಲ
ಮಂಗಳೂರು, ಜು 30: ಕೊರೊನಾ ಹಿನ್ನಲೆ ಬಕ್ರಿದ್ ಹಬ್ಬದಂದು ಮಂಗಳೂರಿನ ಈದ್ಗಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲ ಎಂದು ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಮಸೀದಿಯ ಅದ್ಯಕ್ಷರಾದ ಹಾಜೀ ವೈ ಅಬ್ದುಲ್ಲ ಕುಂಞಿಯವರು ತಿಳಿಸಿದ್ದಾರೆ.
ರಾಜ್ಯ ಸರಕಾರದ ವಕ್ಫ್ ಇಲಾಖೆಯ ಸೂಚನೆಯಂತೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಹಿನ್ನಲೆ ಮಂಗಳೂರು ಈದ್ಗಾ ಮಸೀದಿಯಲ್ಲಿ ಜುಲೈ31 ರಂದು ಬಕ್ರೀದ್(ಈದುಲ್ ಅಝ್’ಹಾ) ಸಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಲಾಗಿಲ್ಲ. ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯಲ್ಲಿ ಜುಲೈ 31 ರಂದು ಬೆಳಿಗ್ಗೆ 7 ಗಂಟೆಗೆ ಈದುಲ್ ಅಝ್’ಹಾ ನಮಾಝ್ ನಡೆಯಲಿದೆ.