Connect with us

BELTHANGADI

ಧರ್ಮಸ್ಥಳದಲ್ಲಿ ಡ್ರೋಣ್ ಮೂಲಕ ಸಾವಯವ ಸ್ಯಾನಿಟೈಸ್ ಸಿಂಪಡಣೆ

ಧರ್ಮಸ್ಥಳ ಜುಲೈ 30: ಕೊರೊನಾ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕೊರೊನಾ ಸೋಂಕು ತಡೆಗಾಗಿ ಹಲವಾರು ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಸಾವಯವ ಸ್ಯಾನಿಟೈಸರ್ ಬಳಸುವುದರಿಂದ ಕೊರೊನಾ ಸೋಂಕನ್ನು ಸಂಪೂರ್ಣವಾಗಿ ತಡೆಗಟ್ಟಬಹುದೆನ್ನುವ ವಾದಗಳೂ ಕೇಳಿ ಬರುತ್ತಿದೆ.

ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಧರ್ಮಸ್ಥಳದಲ್ಲಿ ಚೆನೈ ಮೂಲದ ಸುಗಾರಾಧನಾ ತಂಡ ಸಾವಯವ ಸ್ಯಾನಿಟೈಸರ್ ಅನ್ನು ಡ್ರೋಣ್ ಮೂಲಕ ಪರಿಸರ ತುಂಬಾ ಸಿಂಪಡಿಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಧರ್ಮಸ್ಥಳಕ್ಕೆ ಭಕ್ತಾಧಿಗಳು ಬರುತ್ತಿದ್ದು, ಈ ಪ್ರದೇಶದಲ್ಲಿ ಕೊರೊನಾ ಸೋಂಕು ಹರಡಬಾರದು ಎನ್ನುವ ಕಾರಣಕ್ಕೆ ಕ್ಷೇತ್ರದ‌ ಸುತ್ತಮುತ್ತ ದ್ರೋಣ್ ಮೂಲಕ ಸಾವಯವ ಸ್ಯಾನಿಟೈಸರ್ ಸಿಂಪಡಿಸಲಾಗಿದೆ.

ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್‌ ಕಲಾಂ ಶಿಷ್ಯರಾದ ಚೆನೈ ನ ಡಾ. ಕಾರ್ತಿಕ್ ನಾರಾಯಣ್ ಮತ್ತು‌ ಅಣ್ಣಾ ವಿಶ್ವ ವಿದ್ಯಾನಿಲಯದ ನಿರ್ದೇಶಕ ಡಾ. ಸೆಂಥಿಲ್ ಕುಮಾರ್ ನೇತೃತ್ವದ ಈ ತಂಡ ಈ ಕಾರ್ಯ ಮಾಡಿದ್ದು, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆ ಸಿಂಪಡಣೆ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಸಂತೂರ್ ಸಾವಯವ ವಸ್ತುಗಳನ್ನು ಬಳಸಿಕೊಂಡು ಈ ಸ್ಯಾನಿಟೈಸರ್ ಬಳಸಲಾಗಿದ್ದು, ಕೊರೊನಾ ಸೋಂಕು ತಡೆಯುವಲ್ಲಿ ಇದು ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಸೆಂಥಿಲ್ ಕುಮಾರ್ ತಿಳಿಸಿದ್ದಾರೆ. ತಮಿಳುನಾಡಿನ ಕೊರೊನಾ ಪೀಡಿತ ಪ್ರದೇಶಗಳಲ್ಲಿ ಇದೇ ಡ್ರೋಣ್ ಮೂಲಕ ಸ್ಯಾನಿಟೈಸರ್ ಅನ್ನು ಸಿಂಪಡಣೆ ಮಾಡಲಾಗಿದ್ದು, ಸಿಂಪಡಣೆ ಮಾಡಿದ ಪ್ರದೇಶಗಳಲ್ಲಿ ಕೊರೊನಾ ಸೋಂಕು ಸಂಪೂರ್ಣ ನಿವಾರಣೆಯಾಗಿದೆ. ಅಲ್ಲದೆ ಹೊಸ ಸೋಂಕಿನ ಪ್ರಕರಣ ಪತ್ತೆಯಾಗಿಲ್ಲ.

ಅಣ್ಣಾ ವಿಶ್ವವಿದ್ಯಾನಿಲಯದ ಎಂ.ಐ.ಟಿ ಯಲ್ಲಿ ಈ ಡ್ರೋಣ್ ತಯಾರಿಸಲಾಗಿದೆ. 16 ಲೀಟರ್ ಸ್ಯಾನಿಟೈಸರ್ ತುಂಬಿಸಿಕೊಳ್ಳುವ ಸಾಮರ್ಥ್ಯ ಈ ದ್ರೋಣ್ ಗಿದ್ದು, ದೊಡ್ಡ ಕಟ್ಟಡಗಳನ್ನು ಈ ದ್ರೋಣ್ ಗಳ ಮೂಲಕ ಸಂಪೂರ್ಣ ಸ್ಯಾನಿಟೈಸ್ ಮಾಡಬಹುದಾಗಿದೆ. ಐದು ಗಂಟೆಗಳ ಕಾಲ ಹಾರಾಡುವ‌ ಬ್ಯಾಟರಿ ಸಾಮರ್ಥ್ಯವನ್ನೂ ಈ ದ್ರೋಣ್ ಒಳಗೊಂಡಿದೆ ಎಂದು ಸೆಂಥಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.