KARNATAKA
ಕೊರೊನಾ 4ನೇ ಅಲೆ – ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ

ಬೆಂಗಳೂರು ಎಪ್ರಿಲ್ 25: ಕೊರೊನಾದ ನಾಲ್ಕನೇ ಅಲೆ ಭೀತಿ ಹಿನ್ನಲೆ ರಾಜ್ಯ ಸರಕಾರ ಇಂದು ಸಿಎಂ ನೇತೃತ್ವದಲ್ಲಿ ಪರಿಶೀಲನಾ ಸಭೆ ನಡೆಸಿದೆ. ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿ ಆರೋಗ್ಯ ಸಚಿವ ಸುಧಾಕರ ಸದ್ಯ ರಾಜ್ಯದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಆದರೆ ಮಾಸ್ಕ್ ಧರಿಸದಿದ್ದರೆ ಸದ್ಯಕ್ಕೆ ದಂಡ ಹಾಕುವುದಿಲ್ಲ ಎಂದರು.
ಇತ್ತೀಚೆಗೆ ಏರಿಕೆಯಾಗುತ್ತಿರುವ ಕೊರೊನಾ ಸೊಂಕಿತರಲ್ಲಿ ಯಾವ ತಳಿಯ ಕೊರೊನಾ ಬಂದಿದೆ ಎಂದು ಇನ್ನೂ ಮಾಹಿತಿ ಸಿಕ್ಕಿಲ್ಲ. ಜೀನೋಮಿಕ್ ಸ್ವೀಕ್ವೆನ್ಸ್ ಗೆ ಲ್ಯಾಬ್ ಗೆ ಕಳುಹಿಸಲಾಗಿದೆ. ರಿಪೋರ್ಟ್ ಬಂದ ಕೂಡಲೇ ರೂಪಾಂತರಿಯೇ ಅಥವಾ ಹಳೆಯ ಪ್ರಬೇಧವಾ ಅನ್ನೋದು ಗೊತ್ತಾಗಲಿದೆ. ಪ್ರತಿನಿತ್ಯ 10 ಸಾವಿರ ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗುತ್ತದೆ. ನಮ್ಮ ಆರೋಗ್ಯ ಇಲಾಖೆ ವತಿಯಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ. ಇದೇ 27 ರಂದು ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ. ಅವರು ಏನು ತೀರ್ಮಾನ ಕೊಡ್ತಾರೆ ಅನ್ನೋದನ್ನ ಎದುರು ನೋಡುತ್ತಿದ್ದೇವೆ. ತಕ್ಷಣಕ್ಕೆ ಯಾವುದೆ ನಿರ್ಬಂಧಗಳನ್ನ ಮಾಡಲ್ ಆಗಿ ಜಾರಿ ಮಾಡುವುದಿಲ್ಲ ಎಂದರು.
