LATEST NEWS
ಜುಲೈ 30 ರಿಂದ ಲಘು ವಾಹನ ಸಂಚಾರಕ್ಕೆ ಮರವೂರು ಸೇತುವೆ ಮುಕ್ತ ಸಾಧ್ಯತೆ…!!
ಮಂಗಳೂರು ಜುಲೈ 27: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಪಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಮರವೂರು ಸೇತುವೆಯ ಕುಸಿದ ಪಿಲ್ಲರ್ ನ್ನು ಯಥಾ ಸ್ಥಿತಿಗೆ ತರಲಾಗಿದ್ದು, ದುರಸ್ಥಿ ಕೆಲಸ ಪೂರ್ಣವಾಗಿರುವ ಹಿನ್ನಲೆ ಜುಲೈ 30 ರಿಂದ ಲಘು ವಾಹನ ಸಂಚಾರಕ್ಕೆ ಅವಕಾಶ ಸಿಗುವ ಸಾಧ್ಯತೆ ಇದೆ.
ಪಿಡಬ್ಲ್ಯೂಡಿ ಇಲಾಖೆಯ ತಜ್ಞ ಎಂಜಿನಿಯರ್ ಗಳ ಸಲಹೆಯಂತೆ ಕೆಲ ದಿನಗಳ ಹಿಂದೆ ಪಿಲ್ಲರ್ ನ್ನು ಹೈಡ್ರಾಲಿಕ್ ಮೂಲಕ ಮೇಲಕ್ಕೆತ್ತಿ ಯಥಾಸ್ಥಿತಿಗೆ ತರಲಾಗಿದೆ. ನಂತರ ವಾಹನ ಸಂಚಾರಕ್ಕೆ ಸುಸೂತ್ರವಾಗುವಂತೆ ಕೆಲವು ದುರಸ್ಥಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು ಇದೀಗ ಪೂರ್ಣಗೊಂಡಿದೆ.
ಗುರುವಾರ ತಜ್ಞರ ಉಪಸ್ಥಿತಿಯಲ್ಲಿ ಸೇತುವೆಯ ರೋಡ್ ಟೆಸ್ಟ್ ನಡೆಯಲಿದ್ದು, ಯಶಸ್ವಿಯಾದರೆ ಶುಕ್ರವಾರದಿಂದಲೇ ವಾಹನ ಸಂಚಾರಕ್ಕೆ ಅವಕಾಶ ಸಿಗಲಿದೆ ಎಂದು ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.