LATEST NEWS
ತೈಲ ಬೆಲೆ ಏರಿಕೆ ಜೊತೆ ಖಾಸಗಿ ಬಸ್ ದರ ಏರಿಕೆ…!!

ಮಂಗಳೂರು: ಕೊರೊನಾ ಲಾಕ್ ಡೌನ್ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಖಾಸಗಿ ಬಸ್ ದರ ಏರಿಕೆ ಬಿಸಿ ತಟ್ಟಲಿದೆ. ತೈಲ ಬೆಲೆ ಏರಿಕೆ ನಡುವೆ ಬಸ್ ಸಂಚಾರ ನಡೆಸಲು ಕಷ್ಟಪಡುತ್ತಿದ್ದ ಬಸ್ ಮಾಲೀಕರ ಮನವಿಯನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಮನ್ನಿಸಿ ನಿನ್ನೆಯಿಂದ ಅನ್ವಯವಾಗುವಂತೆ ಖಾಸಗಿ ಬಸ್ ಪ್ರಯಾಣ ದರವನ್ನು ಪರಿಷ್ಕರಿಸಿ ಜಾರಿಗೊಳಿಸಿದೆ.
ಟೋಲ್ ಪ್ಲಾಜಾ ದರದ ಧಾರಣೆಯ ಮೇರೆಗೆ ಸಾರ್ವಜನಿಕ ಖಾಸಗಿ ಬಸ್ಗಳಲ್ಲಿ ಪ್ರಯಾಣಿಕರಿಂದ ಪ್ರತೀ ಕಿ.ಮೀ.ಗೆ ಪ್ರತೀ ಪ್ರಯಾಣಿಕರಿಂದ ಕನಿಷ್ಠ ಮೊತ್ತ 4 ಪೈಸೆಯಂತೆ ತೆಗೆದುಕೊಳ್ಳುವಂತೆ ಬಸ್ ಮಾಲಕರಿಗೆ ನಿರ್ದೇಶನ ನೀಡಲಾಗಿದೆ.

ಸಿಟಿಬಸ್ ನಲ್ಲಿ ಮೊದಲ ಸ್ಟೇಜ್‌ಗೆ (2 ಕಿ.ಮೀ.ವರೆಗೆ) ಕನಿಷ್ಠ 12 ರೂ. ಪರಿಷ್ಕೃತ ದರ ನಿಗದಿಪಡಿಸಲಾಗಿದೆ. ಕ್ರಮವಾಗಿ 15ರಿಂದ 30ರೂ.ವರೆಗೆ ಏರಿಕೆ ಮಾಡಲಾಗಿದೆ. ಸಿಟಿ ಬಸ್ ಗ್ರಾಮಾಂತರದಲ್ಲಿ ಮೊದಲ ಸ್ಟೇಜ್ ಗೆ 2 ಕೀ ಮೀವರೆಗೆ ಕನಿಷ್ಠ 12 ರೂ. ದರ ನಿಗದಿಗೊಳಿಸಲಾಗಿದೆ. ಕ್ರಮವಾಗಿ 30 ರೂ. ಟಿಕೆಟ್ ದರ ಪಡೆಯಬಹುದಾಗಿದೆ.
ಎಕ್ಸ ಪ್ರೆಸ್ ಬಸ್ ನಲ್ಲಿ ಮೊದಲ ಸ್ಟೇಜ್ ಗೆ 11 ರೂ. ಟಿಕೆಟ್ ಪರಿಷ್ಕೃತ ದರ ನಿಗದಿಪಡಿಸಲಾಗಿದೆ. ಕೊನೆಯ 25ನೇ ಸ್ಟೇಜ್ಗೆ ಅಂದರೆ 156ರಿಂದ-163 ಕಿ,ಮೀ ಗೆ 190 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ ಎಂದು ಪ್ರಾದೇಶಿಕ ಸಾರಿಕೆ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.