LATEST NEWS
ಮಂಗಳೂರು – ಪೆಟ್ರೋಲ್ ಬಂಕ್ ಎದುರೆ ಬೆಂಕಿಗಾಹುತಿಯಾದ ಮಾರುತಿ ಕಾರು..!!
ಮಂಗಳೂರು ನವೆಂಬರ್ 10: ಪೆಟ್ರೋಲ್ ಬಂಕ್ ಎದುರೆ ಮಾರುತಿ 800 ಕಾರು ಬೆಂಕಿಗೆ ಆಹುತಿಯಾದ ಘಟನೆ ನಗರದ ನಾರಾಯಣ ಗುರು ವೃತ್ತದ (ಲೇಡಿಹಿಲ್ ವೃತ್ತ) ಬಳಿ ನಡೆದಿದೆ.
ಕಾರು ಲೆಡಿಹಿಲ್ ಪೆಟ್ರೋಲ್ ಬಂಕ್ ಹತ್ತಿರ ಬರುತ್ತಿದ್ದಂತೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪೆಟ್ರೋಲ್ ಬಂಕ್ ಸಮೀಪದಲ್ಲಿ ಘಟನೆ ಹಿನ್ನಲೆ ಆತಂಕ ಮನೆ ಮಾಡಿತ್ತು, ಕೂಡಲೇ ಪೆಟ್ರೋಲ್ ಬಂಕ ಸಿಬ್ಬಂದಿ ನೀರು ಸುರಿದು ಬೆಂಕಿ ನಂದಿಸಿದ್ದಾರೆ.
#mangalore #fire
ಪೆಟ್ರೋಲ್ ಬಂಕ್ ಎದುರೆ ಬೆಂಕಿಗಾಹುತಿಯಾದ ಕಾರು pic.twitter.com/E89RpcRayw— themangaloremirror (@themangaloremir) November 10, 2024