LATEST NEWS
ವಿದ್ಯುತ್ ಕಂಬಕ್ಕೆ ಮಾರುತಿ 800 ಡಿಕ್ಕಿ – ಚಾಲಕ ಪಾರು

ಮಂಗಳೂರು ನವೆಂಬರ್ 17: ವಿದ್ಯುತ್ ಕಂಬಕ್ಕೆ ಮಾರುತಿ 800 ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ತುಂಡಾದರೂ ಚಾಲಕನ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾದ ಘಟನೆ ನಾಟೆಕಲ್ ಸಮೀಪದ ಸಂಕೇಶ ಎಂಬಲ್ಲಿ ತಡರಾತ್ರಿ ವೇಳೆ ಸಂಭವಿಸಿದೆ.
ವಿಧ್ಯಾರ್ಥಿಯೊಬ್ಬ ಚಲಾಯಿಸಿಕೊಂಡು ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ವಿದ್ಯುತ್ ಕಂಬ ಸಂಪೂರ್ಣ ಹಾನಿಯಾಗಿದೆ. ಆದರೆ ಕಾರಿನಲ್ಲಿದ್ದ ವಿಧ್ಯಾರ್ಥಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇತ್ತೀಚಿನ ಹೈಟೆಕ್ ತಂತ್ರಜ್ಞಾನ ಇರುವ ಕಾರುಗಳಲ್ಲಿ ಏರ್ ಬಲೂನ್ ಇದ್ದರೂ ಕೂಡ ಕಾರಿನಲ್ಲಿದ್ದವರು ಬದುಕುಳಿವ ಸಾಧ್ಯತೆ ಕಡಿಮೆ ಇದ್ದು, ಅಂತದ್ರಲ್ಲಿ ಹಳೆಯ ಮಾರುತಿ 800 ಕಾರು ವಿದ್ಯುತ್ ಕಂಬಕ್ಕೆ ಗುದ್ದಿದರೂ ಚಾಲಕನ ಪಾರಾಗಿದ್ದಾನೆ. ಮಾರುತಿ 800 ಕಾರೇ ಎಂದಿಗೂ ಬಲಿಷ್ಠ ಅನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂತು. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ.