FILM
ಸಾಯಿ ಪಲ್ಲವಿ ಮನೆಯಲ್ಲಿ ಮದುವೆ ಸಂಭ್ರಮ..! ಶೀಘ್ರದಲ್ಲೇ ಸಪ್ತಪದಿ ತುಳಿಯಲಿರೋ ನಟಿ..!

ಹೈದ್ರಾಬಾದ್ : ನ್ಯಾಚುರಲ್ ಬ್ಯೂಟಿ ಸ್ಟಾರ್ ಸಾಯಿ ಪಲ್ಲವಿ ಮನೆಯಲ್ಲಿ ಶೀಘ್ರದಲ್ಲೇ ಮದುವೆ ಸಡಗರ ಶುರುವಾಗಲಿದ್ದು ಇದನ್ನು ಸ್ವತಃ ನಟಿ ಬಹಿರಂಗ ಪಡಿಸಿದ್ದಾರೆ.
ನಟಿ ಸಾಯಿ ಪಲ್ಲವಿಗೆ ಸಹೋದರಿ ಇರುವುದು ಎಲ್ಲರಿಗೂ ಗೊತ್ತು. ಅವರೇ ಸಹೋದರಿ ಪೂಜಾ ಕಣ್ಣನ್ ಅಕ್ಕನಿಗಿಂತ ಮೊದಲು ಮದುವೆಯಾಗಲಿದ್ದಾರೆ ಪೂಜಾ ಇತ್ತೀಚೆಗೆ ಈ ಕುರಿತು ಬಹಿರಂಗಪಡಿಸಿದ್ದಾರೆ. ಇನ್ನು ಪೂಜಾ ಕಣ್ಣನ್ ಸಹ ನಟಿಯಾಗಲು ಹಲವಾರು ಪ್ರಯತ್ನಗಳನ್ನು ಮಾಡಿದ್ದಾರೆ. ಅವರು 2021 ರಲ್ಲಿ ಬಿಡುಗಡೆಯಾದ ಚಿತಿರೈ ಸೆವ್ವಾನಂ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸಿನಿಮಾ ಕಮರ್ಷಿಯಲ್ ಆಗಿ ಹೆಚ್ಚು ಓಡಲಿಲ್ಲ.. ಹೀಗಾಗಿ ಪೂಜಾ ಕಣ್ಣನ್ ಮತ್ತೆ ನಟಿಸಲಿಲ್ಲ. ಸದ್ಯ ಆಕೆ ಸಾಮಾಜಿಕ ಕಾರ್ಯಕರ್ತೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇಸಾಯಿ ಪಲ್ಲವಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು.
