Connect with us

  KARNATAKA

  ತಾಳಿ ಕಟ್ಟುವ ಶುಭ ವೇಳೆ ಪ್ರಿಯಕರನ ಕೈಯಲ್ಲಿ ಹೂವಿನ ಮಾಲೆ…! ಹಾಸನದಲ್ಲಿ ಮುರಿದು ಬಿತ್ತು ಮದುವೆ..!

  ಹಾಸನ: ತಾಳಿ ಕಟ್ಟುವ ಶುಭ  ವೇಳೆಯಲ್ಲಿ ಮದುವೆ ಮಂಟಪಕ್ಕೆ ಯುವಕನೋರ್ವನ  ಎಂಟ್ರಿಯಿಂದ ಮದುವೆ ಸಮಾರಂಭವೇ  ಮುರಿದು ಬಿದ್ದಿರುವ ಘಟನೆ ಹಾಸನ ಜಿಲ್ಲೆ ಬೇಲೂರು ಪಟ್ಟಣದಲ್ಲಿ ನಡೆದಿದೆ.

  ಗುರುವಾರ ಬೇಲೂರಿನ ಒಕ್ಕಲಿಗ ಸಮುದಾಯ ಭವನದಲ್ಲಿ ಮದುವೆಯೊಂದು ಆಯೋಜನೆಯಾಗಿತ್ತು, ಆದರೆ ತಾಳಿ ಕಟ್ಟುವ ವೇಳೆ ಕಲ್ಯಾಣಮಂಟಪಕ್ಕೆ ಬಂದ ನವೀನ್​​ ಎಂಬಾತ ಎಂಟ್ರಿಕೊಟ್ಟು ಮದುವೆಗೆ ಅಡ್ಡಿ ಮಾಡಿದ್ದಾನೆ.

  ಮದುಮಗನ  ಕೈಯಲ್ಲಿದ್ದ ತಾಳಿ ಕಿತ್ತುಕೊಂಡು ತೇಜಸ್ವಿನಿ ನನ್ನನ್ನು ಪ್ರೀತಿಸುತ್ತಿದ್ದಾಳೆ. ನನ್ನ ಜೊತೆ ಮದುವೆ ಮಾಡಿ ಎಂದು ಪಟ್ಟುಹಿಡಿದಿದ್ದಾನೆ. ಹೀಗಾಗಿ ಕಲ್ಯಾಣಮಂಟಪದಲ್ಲಿ ಕೆಲಕಾಲ‌ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಪ್ರವೇಶಿಸಿದ ಬೇಲೂರು ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

  ತೇಜಸ್ವಿನಿ ತನ್ನನ್ನ ಪ್ರೀತಿಸುತ್ತಿದ್ದಳು. ತನಗೆ ವಿಚಾರ ಮುಚ್ಚಿಟ್ಟು ಮದುವೆ ಮಾಡಿಕೊಳ್ಳಲಾಗುತ್ತಿದೆ ಎಂದು ಯುವಕ ಆರೋಪಿಸಿದ್ದಾನೆ. ಇತ್ತ ಪ್ರೀತಿ ವಿಚಾರ ತಿಳಿದ ಮದುಮಗ ಮದುವೆ ಬೇಡ  ಎಂದು ಅರ್ಧದಲ್ಲೇ ಎದ್ದು ಹೋಗಿದ್ದಾನೆ.

   

  Share Information
  Advertisement
  Click to comment

  You must be logged in to post a comment Login

  Leave a Reply