LATEST NEWS
ಮರಕಡ ಪರಾಶಕ್ತಿ ಕ್ಷೇತ್ರದ ಸ್ಥಾಪಕ ಶ್ರೀ ನರೇಂದ್ರನಾಥ ಸ್ವಾಮೀಜಿ ನಿಧನ

ಮಂಗಳೂರು ಜನವರಿ 27: ಮರಕಡ ಪರಾಶಕ್ತಿ ಕ್ಷೇತ್ರದ ಸ್ಥಾಪಕ ಶ್ರೀ ನರೇಂದ್ರನಾಥ ಸ್ವಾಮೀಜಿ ಬುಧವಾರ ರಾತ್ರಿ ನಿಧನರಾಗಿದ್ದಾರೆ.
ಕಳೆದ ಹಲವು ವರ್ಷಗಳಿಂದ ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶ್ರೀಗಳು ಮಡ್ಯಾರ್ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಕೂಡಾ ಪಾಲ್ಗೊಳ್ಳುತ್ತಾ ಸಮಾಜದ ಉನ್ನತಿಗಾಗಿ ಶ್ರಮಿಸುತ್ತಿದ್ದರು. ಮರಕಡ ಮತ್ತು ಮಡ್ಯಾರ್‌ನಲ್ಲಿ ಕ್ಷೇತ್ರ ಹೊಂದಿ ಅಪಾರ ಭಕ್ತಾದಿಗಳನ್ನು ಹೊಂದಿದ್ದರು.

ಸ್ವಾಮೀಜಿಯ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಂದು ಅಪರಾಹ್ನ 2:30ರವರೆಗೆ ಮರಕಡದ ಅವರ ಸ್ವಗೃಹದಲ್ಲಿಅವಕಾಶ ಕಲ್ಪಿಸಲಾಗಿದೆ. ಬಳಿಕ 3 ಗಂಟೆಯಿಂದ ಸಂಜೆ 5ರ ತನಕ ಮಡ್ಯಾರ್ ನಲ್ಲಿಸಾರ್ವಜನಿಕ ದರ್ಶನಕ್ಕೆ ಅವಕಾಶವಿರುತ್ತದೆ. ಬಳಿಕ ಅಲ್ಲಿಯೇ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವ