LATEST NEWS
ಮ್ಯಾನ್ ಹೋಲ್ ಗೆ ಕಾರ್ಮಿಕರನ್ನು ಇಳಿಸಿದ ಪ್ರಕರಣ : MCC ವಿರುದ್ದ ಕೇಸು ದಾಖಲು

ಮ್ಯಾನ್ ಹೋಲ್ ಗೆ ಕಾರ್ಮಿಕರನ್ನು ಇಳಿಸಿದ ಪ್ರಕರಣ : MCC ವಿರುದ್ದ ಕೇಸು ದಾಖಲು
ಮಂಗಳೂರು,ಅಕ್ಟೋಬರ್ 22 : ಮಂಗಳೂರು ಮಹಾ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮ್ಯಾನ್ ಹೋಲ್ ಗೆ ಕಾರ್ಮಿಕರನ್ನು ಇಳಿಸಿದ ಪ್ರಕರಣಕ್ಕೆ ಸಂಬಂಧಿಸದಂತೆ ಕೊನೆಗೂ ಮಂಗಳೂರು ಮಹಾ ನಗರ ಪಾಲಿಕೆ ವಿರುದ್ದ ಕೇಸು ದಾಖಲಾಗಿದೆ.
ಮಂಗಳೂರಿನ ದಕ್ಷಿಣ ( ಪಾಂಡೇಶ್ವರ) ಪೋಲಿಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ. ಸಿಪಿಎಂ ಮುಖಂಡ ಯೋಗಿಶ್ ಜೆಪ್ಪು ಅವರು ಮಂಗಳೂರು ಮಹಾನಗರ ಪಾಲಿಕೆ ವಿರುದ್ದ ದೂರು ನೀಡಿದ್ದರು.

ದೂರನ್ನು ಸ್ವೀಕರಿಸಿದ ಪೋಲಿಸರು ಪಾಲಿಕೆ ವಿರುದ್ದ 286/17 ಕಲಂ 4(1)ಮತ್ತು ಕಲಂ 9 ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೆತ್ತಿಕೊಂಢಿದ್ದಾರೆ.
ಪ್ರಕರಣದ ಹಿನ್ನೆಲೆ :
ಮ್ಯಾನ್ ಹೋಲ್ ಒಳಗೆ ಕಾರ್ಮಿಕರ ಇಳಿಸಿ ಅನಾಗರಿಕ ವರ್ತನೆ ತೋರಿದ ಮಂಗಳೂರು ಮಹಾ ನಗರ ಪಾಲಿಕೆ ವಿರುದ್ಧ ಸಿಪಿಐಎಂ ಶನಿವಾರ ಪ್ರತಿಭಟನೆ ನಡೆಸಿತ್ತು.
ಪ್ರತಿಭಟನೆಯಲ್ಲಿ ಮಂಗಳೂರು ಮಹಾ ನಗರ ಪಾಲಿಕೆ ತಪ್ಪಿತಸ್ಥ ಅಧಿಕಾರಿ ಮತ್ತು ಗುತ್ತಿಗೆದಾರರ ವಿರುದ್ದ ಕ್ರಮಕ್ಕೆ ಆಗ್ರಹಿಸಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಪಿಐಎಂ ಪೌರ ಕಾರ್ಮಿಕರನ್ನು ಈ ರೀತಿಯಾಗಿ ಕಾನೂನುಬಾಹಿರವಾಗಿ ದುಡಿಸಿಕೊಂಡ ಮೇಯರ್ ಹಾಗೂ ಪಾಲಿಕೆಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲಾಗುವುದು ಎಂದೂ ಎಚ್ಚರಿಕೆಯನ್ನು ನೀಡಿತ್ತು.