Connect with us

LATEST NEWS

ಅನಂತ್ ಕುಮಾರ್  ಹೆಗಡೆಗೆ ಟಿಪ್ಪು ಇತಿಹಾಸ ಏನು ಗೊತ್ತಿದೆ ? : CM ಸಿದ್ದರಾಮಯ್ಯ ತರಾಟೆ

ಅನಂತ್ ಕುಮಾರ್  ಹೆಗಡೆಗೆ ಟಿಪ್ಪು ಇತಿಹಾಸ ಏನು ಗೊತ್ತಿದೆ ? : CM ಸಿದ್ದರಾಮಯ್ಯ ತರಾಟೆ

ಮಂಗಳೂರು, ಅಕ್ಟೋಬರ್ 22 : ಯಾರೇ ವಿರೊಧ ಮಾಡಿದರೂ ಟಿಪ್ಪು ಜಯಂತಿ ಆಚರಣೆ ನಡದೇ ನಡೆಯುತ್ತೆ. ವಿರೋಧ ಮಾಡುವವರಿಗೆ ಇತಿಹಾಸ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದ್ದಾರೆ.

ದಕ್ಷಿಣ ಕನ್ನಡದ ಬಂಟ್ವಾಳ ವಿಧಾನ ಸಭಾ  ಕ್ಷೇತ್ರದಲ್ಲಿ 252 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ನೆರವೇರಿಸಲು ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿಗಳು ಬಜ್ಪೆ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದರು.

ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ರಾಜ್ಯ ಸರ್ಕಾರ ತನ್ನ ನಿಲುವಿಗೆ ಬದ್ದವಾಗಿದೆ. ಯಾರೇ ವಿರೋಧ ಮಾಡಿದರು ಟಿಪ್ಪು ಜಯಂತಿ ನಡೆದೆ ನಡೆಯುತ್ತೆ.

ಟಿಪ್ಪು ಜಯಂತಿ ವಿರೋಧ ಮಾಡುವವರಿಗೆ ಟಿಪ್ಪು ಇತಿಹಾಸ ಗೊತ್ತಿಲ್ಲ ಎಂದ ಮುಖ್ಯಮಂತ್ರಿಗಳು, ಯಡಿಯೂರಪ್ಪ ಕೆಜೆಪಿ ಮಾಡಿದಾಗ ಟಿಪ್ಪು ಜಯಂತಿ ಮಾಡಿಲ್ವೇ ಎಂದು ಪ್ರಶ್ನಿಸಿದ ಅವರು ಯಡ್ಯೂರಪ್ಪ ಟಿಪ್ಪು ಖಡ್ಗ, ಕಿರೀಟ ಕೂಡ ಹಾಕ್ಕೊಂಡಿದ್ದರು ಎಂದು ನೆನಪು ಮಾಡಿದರು.

ಅನಂತ್ ಕುಮಾರ್  ಹೆಗಡೆಗೆ ಟಿಪ್ಪು ಇತಿಹಾಸ ಏನು ಗೊತ್ತಿದೆ ? ಮೈಸೂರಿನಲ್ಲಿ ಟಿಪ್ಪು ನಡೆಸಿದ ನಾಲ್ಕು ಯುದ್ಧಗಳು ಗೊತ್ತಿದ್ಯಾ ? ಟಿಪ್ಪು ಹೇಗೆ ಸತ್ತಾ ಗೊತ್ತಾ ಇವರಿಗೆ ? ಟಿಪ್ಪು ಮಕ್ಕಳನ್ನು ಅಡ ಇಟ್ಟಿದ್ದು ಯಾಕೆ ಗೊತ್ತಿದ್ಯಾ ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಪ್ರೊಟೊಕಾಲ್ ಪ್ರಕಾರ ಎಲ್ಲರಿಗೂ ಆಹ್ವಾನ ನೀಡಲಾಗುವುದು. ಕಾರ್ಯಕ್ರಮಕ್ಕೆ ಬರುವವರು ಬರಲಿ ಎಂದರು.

ಕಲ್ಲಿದ್ದಲು ಹಗರಣ ಸಂಬಂಧಿದಂತೆ ಬಿಜೆಪಿ ರಾಜ್ಯ ಆಧ್ಯಕ್ಷ ಯಡ್ಯೂರಪ್ಪ ಅವರ ಕಲ್ಲಿದ್ದಲು ಅರೋಪ ಆಧಾರ ರಹಿತ ಹಾಗೂ ರಾಜಕೀಯ ದುರದ್ದೇಶ ಪೂರಿತವಾಗಿದೆ. ಈಗಾಗಲೇ ಈ ಸಂಬಂಧ  ಡಿ.ಕೆ ಶಿವಕುಮಾರ್ ಸೇರಿದಂತೆ ಹಲವರು ಹೇಳಿಕೆ ನೀಡಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳಿದರು.