Connect with us

LATEST NEWS

ಜೂನ್ 3 ರಂದು ಕೇರಳಕ್ಕೆ ಮುಂಗಾರು ಪ್ರವೇಶ – ಕರಾವಳಿಯಲ್ಲಿ ಎಲ್ಲೋ ಅಲರ್ಟ್

ಮಂಗಳೂರು ಮೇ 31: ಮುಂಗಾರು ಮಳೆ ಕೇರಳಕ್ಕೆ ಇನ್ನು ಎರಡು ದಿನಗಳಲ್ಲಿ ಪ್ರವೇಶಿಸುವ ಸಾಧ್ಯತೆ ಇರುವುದರಿಂದ ಕರ್ನಾಟಕ ಕರಾವಳಿಯಲ್ಲಿ ಜೂನ್ 1 ರಿಂದ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಕರಾವಳಿ ಕರ್ನಾಟಕದಲ್ಲಿ ಎಲ್ಲೋ ಅಲರ್ಟ್ ಪ್ರಕಟಿಸಿದೆ.


ಭಾರತ ಉಪಖಂಡಕ್ಕೆ ಈ ವರ್ಷದ ಮುಂಗಾರು 2 ದಿನ ತಡವಾಗಿ ಬರಲಿದೆ. ಕೇರಳ ಕರಾವಳಿಗೆ ಮುಂಗಾರು ಮಳೆ ಜೂನ್ 3ರಂದು ಅಪ್ಪಳಿಸಬಹುದು ಎಂದು ಹವಮಾನ ಇಲಾಖೆ ನಿನ್ನೆ ತಿಳಿಸಿತ್ತು, ಆದರೆ ಹವಾಮಾನದ ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿರುವ ತಜ್ಞರು ಮುಂಗಾರು ಜೂನ್ 1ರಿಂದ ಮತ್ತಷ್ಟು ತೀಕ್ಷ್ನಗೊಳ್ಳಬಹುದು. ಕೇರಳದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ. ಜೂನ್ 3ರಂದೇ ಕೇರಳಕ್ಕೆ ಮುಂಗಾರು ಅಪ್ಪಳಿಸಲಿದೆ’ ಎಂದು ಹೇಳಿದ್ದಾರೆ. ಹವಾಮಾನ ಇಲಾಖೆಯ ದತ್ತಾಂಶಗಳನ್ನು ಉಲ್ಲೇಖಿಸಿ ಭಾರತ ಸರ್ಕಾರವೂ ಹೇಳಿಕೆ ಬಿಡುಗಡೆ ಮಾಡಿದೆ. ಕೇರಳ ಮತ್ತು ಮಾಹೆಗಳಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದೂ ಹವಾಮಾನ ಇಲಾಖೆ ಹೇಳಿದೆ.

ಆದರೆ ಖಾಸಗಿ ಸ್ಕೈಮೆಟ್ ಸಂಸ್ಥೆ ಮಾತ್ರ ಕೇರಳಕ್ಕೆ ಈಗಾಗಲೇ ಮುಂಗಾರು ಪ್ರವೇಶಿಸಿದ್ದು, ಕೇರಳದಾದ್ಯಂತ ಸುರಿಯುತ್ತಿರುವ ಭಾರೀ ಮಳೆ ಇದಕ್ಕೆ ಕಾರಣ ಎಂದು ತಿಳಿಸಿದೆ. ಇನ್ನು ಕರಾವಳಿಯ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ನಿನ್ನೆ ಭಾನುವಾರ ಉತ್ತಮ ಮಳೆಯಾಗಿದ್ದು, ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಇಂದು ಮಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಮೋಡ ಮತ್ತು ಬಿಸಿಲಿನ ವಾತಾವರಣವನ್ನು ಹೊಂದಿದ್ದು, ನಡುವೆ ಮಳೆಯ ಸಿಂಚನ ಆಗಿದೆ.
ಉಡುಪಿ ಜಿಲ್ಲೆಯಲ್ಲಿ ಮಳೆಯಾದ ಬಗ್ಗೆ ವರದಿಯಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *