Connect with us

    FILM

    ಲಾಕ್ ಡೌನ್ ನಡುವೆ ಸದ್ದಿಲ್ಲದೆ ಮದುವೆಯಾದ ನಟಿ ಪ್ರಣೀತಾ ಸುಭಾಷ್

    ಬೆಂಗಳೂರು ಮೇ.31: ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಲಾಕ್ ಡೌನ್ ನಡುವೆ ಸದ್ದಿಲ್ಲದೆ ಹಸೆಮಣೆ ಏರಿದ್ದಾರೆ. ಇಂದು ಪ್ರಣೀತಾ ಅವರ ಸಂಬಧಿಕರೊಬ್ಬರು ಪ್ರಣೀತಾ ಅವರ ಮದುವೆ ಪೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ನಂತರ ಈ ಪೋಟೋ ಸಖತ್ ವೈರಲ್ ಆಗಿದ್ದು, ಕೊನೆಗೆ ಸ್ವತಃ ಪ್ರಣೀತಾ ಅವರು ಸಾಮಾಜಿಕ ಜಾಲತಾಣದಲ್ಲಿ ಮದುವೆಗೆ ಬಗ್ಗೆ ಇದ್ದ ಗಾಸಿಫ್ ಗೆ ಕೊನೆ ಎಳೆದಿದ್ದಾರೆ.

    ನಿನ್ನೆ ಭಾನುವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಉದ್ಯಮಿ ನಿತಿನ್ ರಾಜು ಜತೆ ವಿವಾಹವಾಗಿದ್ದಾರೆ. ಬೆಂಗಳೂರು ಹೊರವಲಯದಲ್ಲಿನ ಮನೆಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬದ ಆಪ್ತರಷ್ಟೇ ಭಾಗವಹಿಸಿದ್ದರು ಎನ್ನಲಾಗಿದೆ.

    ಕೋವಿಡ್ ನಿಯಮಾವಳಿ ಇರುವುದರಿಂದ ಸರಳ ವಿವಾಹ ನಡೆಸಲಾಗಿದ್ದು, ಇದೊಂದು ನಿಯೋಜಿತ ಮತ್ತು ಪ್ರೇಮ ವಿವಾಹವಾಗಿದೆ ಎಂದು ನಟಿ ಪ್ರಣೀತಾ ಹೇಳಿದ್ದಾರೆ.

    ಪ್ರಣೀತಾ ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲೂ ನಟಿಸಿದ್ದಾರೆ. ಪ್ರಣೀತಾ ಮದುವೆ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply