Connect with us

LATEST NEWS

ದಕ್ಷ ಪೊಲೀಸ್ ಅಧಿಕಾರಿ ವಿನಯ್ ಗಾಂವ್ಕರ್ ಅವರಿಗೆ ಹೃದಯಸ್ಪರ್ಶಿ ಬಿಳ್ಗೊಡುಗೆ

ಮಂಗಳೂರು ಮೇ.31: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿ ರಾಷ್ಟ್ರಪತಿ ಪದಕ ಹಾಗೂ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತರಾಗಿದ ಮಂಗಳೂರು ಪೊಲೀಸ್ ಕಮಿಷನರೇಟ್ ಡಿಸಿಪಿ ಆಗಿರುವ ವಿನಯ ಗಾಂವ್ಕರ್ ಅವರು ಇಂದು ಪೊಲೀಸ್ ಸೇವೆಯಿಂದ ನಿವೃತ್ತರಾಗಿದ್ದಾರೆ.


ಮೂಲತಃ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ನಿವಾಸಿಯಾಗಿರುವ ವಿನಯ ಗಾಂವ್ಕರ್ ಅವರು ಮೈಸೂರಿನಲ್ಲಿ ತರಬೇತಿ ಪಡೆದ ಬಳಿಕ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರೊಬೆಷನರಿಯಾಗಿ ಪೊಲೀಸ್ ಸೇವೆ ಪ್ರಾರಂಭಿಸಿದರು. ನಂತರ ನಿವೃತ್ತಿವರೆಗೂ ಬಹುವರ್ಷ ದಕ್ಷಿಣಕನ್ನಡ ಜಿಲ್ಲೆಯಲ್ಲಿ ವಿವಿಧ ಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.


ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿದ್ದ ಕೋಮುಸಂಘರ್ಷ, ಅಹಿತಕರ ಘಟನೆ ನಿಯಂತ್ರಣದ ಸಂದರ್ಭ ವಿನಯ್ ಗಾಂವ್ಕರ್ ಅವರ ಧೈರ್ಯ, ಚಾಕಚಾಕ್ಯತೆ ಆಕ್ರಮಣಕಾರಿ ಮನೋಭಾವ ಪೊಲೀಸ್ ಇಲಾಖೆಯಲ್ಲಿ ಅಚ್ಚೊತ್ತಿತ್ತು. 31 ವರ್ಷಗಳ ಪೊಲೀಸ್ ಇಲಾಖೆ ಕರ್ತವ್ಯ ನಿರ್ವಹಿಸಿರುವ ವಿನಯ್ ಗಾಂವ್ಕರ್ ತಮ್ಮ ಸೇವೆಯ ಕೊನೆಯ ದಿನಗಳನ್ನು ಮಂಗಳೂರಿನ ಪೊಲೀಸ್ ಕಮಿಷನರೇಟ್ ನಲ್ಲಿ ಡಿಸಿಪಿಯಾಗಿ ಕರ್ತವ್ಯ ನಿರ್ವಸಿದ್ದಾರೆ. ಈ ಸಂದರ್ಭ ಪೊಲೀಸ್ ಇಲಾಖೆಯಲ್ಲಿ ನಡೆದ ಕಾರು ಮಾರಾಟ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ವಿರುದ್ದ ತನಿಖೆ ನಡೆಸಿ ತಮ್ಮ ಮದ್ಯಂತರ ವರದಿ ನೀಡಿ ಶ್ಲಾಘನೆಗೆ ಪಾತ್ರರಾಗಿದ್ದರು.


ಇಂದು ಪೊಲೀಸ್ ಕಮಿಷನರೇಟ್ ನಲ್ಲಿ ಗಾಂವ್ಕರ್ ಅವರಿಗೆ ಹೃದಯ ಸ್ಪರ್ಶಿ ಬಿಳ್ಗೋಡುಗೆ ನೀಡಲಾಯಿತು. ಪೊಲೀಸ್ ಸಿಬ್ಬಂದಿಗಳು ಗಾಂವ್ಕರ್ ಅವರಿಗೆ ಹೂವಿನ ಮಳೆ ಸುರಿಸಿ ಬಿಳ್ಗೊಡುಗೆ ನೀಡಿದರು.