FILM
ತಮಿಳಿನ ಖ್ಯಾತ ನಿರ್ದೇಶಕ ಭಾರತಿರಾಜ ಅವರ ಪುತ್ರ ನಟ ಮನೋಜ್ ಭಾರತಿರಾಜ ಹೃದಯಾಘಾತದಿಂದ ನಿಧನ

ಚೆನ್ನೈ ಮಾರ್ಚ್ 26: ತಮಿಳಿನ ಖ್ಯಾತ ಚಿತ್ರ ನಿರ್ದೇಶಕ ಭಾರತಿರಾಜ ಅವರ ಪುತ್ರ ನಟ ಮನೋಜ್ ಭಾರತಿರಾಜ ಅವರು ಹೃದಯಾಘಾತದಿಂದ ಸಾವನಪ್ಪಿದ್ದಾರೆ. ಅವರಿಗೆ 48 ವರ್ಷ ವಯಸ್ಸಾಗಿತ್ತು. ಮನೋಜ್ ಅವರ ಪತ್ನಿ ಅಶ್ವತಿ ಅಲಿಯಾಸ್ ನಂದನಾ ಮತ್ತು ಇಬ್ಬರು ಪುತ್ರಿಯರಾದ ಅರ್ಶಿತಾ ಮತ್ತು ಮತಿವಥನಿ ಅವರನ್ನು ಅಗಲಿದ್ದಾರೆ.
ಮನೋಜ್ ಇತ್ತೀಚೆಗೆ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದರು. ಚೆಟ್‌ಪೇಟ್‌ನಲ್ಲಿರುವ ತಮ್ಮ ಮನೆಯಲ್ಲಿ ಮಂಗಳವಾರ ಸಂಜೆ ಅವರಿಗೆ ಹೃದಯಾಘಾತವಾಗಿದೆ. ತಾಜ್ ಮಹಲ್, ಸಮುದ್ರಂ ಮತ್ತು ಅಲ್ಲಿ ಅರ್ಜುನ ಮುಂತಾದ ಚಿತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದ ನಟ ಮನೋಜ್. ಅವರ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆ, ಹಲವಾರು ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಂತಾಪ ಸೂಚಿಸಿದ್ದಾರೆ.

1999ರಲ್ಲಿ ತೆರೆಗೆ ಬಂದ ‘ತಾಜ್ ಮಹಲ್’ ಚಿತ್ರದ ಮೂಲಕ ಮನೋಜ್ ಕುಮಾರ್ ಭಾರತಿರಾಜ ನಟನೆ ಆರಂಭಿಸಿದರು. ‘ಸಮುದಿರಂ’, ‘ಕಾದಲ್ ಪೂಕಳ್’, ‘ಅಲ್ಲಿ ಅರ್ಜುನ’, ‘ಪಲ್ಲವನ್’, ‘ಬೇಬಿ’, ‘ಚಾಂಪಿಯನ್’, ‘ಈಶ್ವರನ್’, ‘ಮಾನಾಡು’, ‘ವಿರುಮನ್’ ಮುಂತಾದ ಚಿತ್ರಗಳಲ್ಲಿ ಮನೋಜ್ ಕುಮಾರ್ ಭಾರತಿರಾಜ ಅಭಿನಯಿಸಿದ್ದಾರೆ. 2023ರಲ್ಲಿ ರಿಲೀಸ್ ಆದ Margazhi Thingal ಚಿತ್ರಕ್ಕೆ ಮನೋಜ್ ಕುಮಾರ್ ಭಾರತಿರಾಜ ಆಕ್ಷನ್ ಕಟ್ ಹೇಳಿದ್ದರು.