Connect with us

    MANGALORE

    ಮಾಣಿಬೆಟ್ಟುಗುತ್ತುವಿನಲ್ಲಿ ಜೋಡುಕೆರೆ ಕಂಬಳ

    ಮಂಗಳೂರು ಅಕ್ಟೋಬರ್ 18 : ಮಂಗಳೂರು ತಾಲೂಕಿನ, ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಣಿಬೆಟ್ಟುಗುತ್ತು ಎಂಬಲ್ಲಿ ಸರ್ವ ಜಾತಿ, ಧರ್ಮ, ಪಕ್ಷಗಳನ್ನು ಒಗ್ಗೂಡಿಸುವ ಕರಾವಳಿಯ ಜಾನಪದ ಕ್ರೀಡೆ ಜೋಡುಕರೆ ಕಂಬಳವನ್ನು 2023-24ನೇ ಸಾಲಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಸಂಘಟಕರಾದ ರಾಜಕುಮಾರ್ ಶೆಟ್ಟಿ ತಿಳಿಸಿದ್ದಾರೆ.


    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪೂರ್ವಭಾವಿಯಾಗಿ ನೂತನ ಕರೆಯ ನಿರ್ಮಾಣಕ್ಕಾಗಿ ಭೂಮಿ ಪೂಜೆಯು ತಾರೀಕು 22-10-2023ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 8-55ರ ಸುಮುಹೂರ್ತದಲ್ಲಿ ಜಿಲ್ಲಾ ಕಂಬಳ ಸಮಿತಿಯ ಪದಾಧಿಕಾರಿಗಳು ಮತ್ತು ಕಂಬಳ ಕ್ಷೇತ್ರದ ದಿಗ್ಗಜರು ಹಾಗೂ ಮೂಳೂರು, ಅಡೂರು ಗ್ರಾಮಕ್ಕೆ ಸಂಬಂಧಪಟ್ಟ ಗುತ್ತು ಗಡಿಕಾರರ, ಧಾರ್ಮಿಕ ಮುಖಂಡರುಗಳ, ರಾಜಕೀಯ ನೇತಾರರ ಹಾಗೂ ಸಮಾಜ ಚಿಂತಕರ ಉಪಸ್ಥಿತಿಯಲ್ಲಿ ನಡೆಯಲಿದೆ.

    ಈ ಕರೆಯು 135 ಮೀಟರ್ ಉದ್ದ, 12 ಮೀಟರ್ ಅಗಲವಿದ್ದು, ಕೋಣ ಬಿಡುವ (ಗಂತ್) 12 ಮೀಟರ್ ಉದ್ದ, 20 ಮೀಟರ್ ಅಗಲ ಹೊಂದಿರುತ್ತದೆ. 30 ಎಕರೆಗಿಂತ ಹೆಚ್ಚು ಪಾರ್ಕಿಂಗ್ ಹಾಗೂ ಇನ್ನಿತರ ವ್ಯವಸ್ಥೆಗೆ ಮೀಸಲಿಡಲಾಗಿದೆ. • ಮಂಗಳೂರಿನಿಂದ ಸುಮಾರು 14 ಕಿ.ಮೀ. ದೂರದಲ್ಲಿ ನೂತನ ರಾಷ್ಟ್ರೀಯ ಹೆದ್ದಾರಿ -169 ಬೈಪಾಸ್‌ ಪಕ್ಕದಲ್ಲಿ ಕಂಬಳದ ಕರೆ ಇರುತ್ತದೆ. ಗುರುಪುರ ಕೈಕಂಬ ಜಂಕ್ಷನ್‌ನಿಂದ 3 ಕಿ.ಮೀ. ಬಿ.ಸಿ.ರೋಡ್, ಕಲ್ಲಿಗೆ ಜಂಕ್ಷನ್‌ನಿಂದ 14 ಕಿ.ಮೀ, ಈ ಕಂಬಳಕ್ಕೆ 175ಕ್ಕಿಂತಲೂ ಹೆಚ್ಚು ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ. ಈ ಕಂಬಳವು ವಿನೂತನ ಪರಿಕಲ್ಪನೆಯಲ್ಲಿ ನಡೆಯಲಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *