Connect with us

KARNATAKA

ಮಂಗಳೂರು: ಬಂದರು ನಗರಿಯಲ್ಲಿ ಮಹಿಳಾ ವೈದ್ಯರ ಕ್ಯಾಟ್ ವಾಕ್..!

ರಾಜ್ಯದಲ್ಲೇ  ಮೊದಲ ಬಾರಿಗೆ ಮಂಗಳೂರಿನಲ್ಲಿ ಮಹಿಳಾ ವೈದ್ಯರ ಫ್ಯಾಷನ್ ಶೋ ಆಯೋಜಿಸಲಾಗಿತ್ತು. 20 ಮಂದಿ ಮಹಿಳಾ ವೈದ್ಯರು ಈ ಫ್ಯಾಷನ್ ಶೋ ದಲ್ಲಿ ಭಾಗವಹಿಸಿ, ಸಂಭ್ರಮಿಸಿದರು.

ಮಂಗಳೂರು : ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಮಹಿಳಾ ವೈದ್ಯರ ಫ್ಯಾಷನ್ ಶೋ ಆಯೋಜಿಸಲಾಗಿತ್ತು. 20 ಮಂದಿ ಮಹಿಳಾ ವೈದ್ಯರು ಈ ಫ್ಯಾಷನ್ ಶೋ ದಲ್ಲಿ ಭಾಗವಹಿಸಿ, ಸಂಭ್ರಮಿಸಿದರು.

ಅಂದ ಹಾಗೇ ವೈದ್ಯರು ರೋಗಿಗಳ ಚಿಕಿತ್ಸೆ ಅಥವಾ ಕುಟುಂಬದ ಕಡೆ ಗಮನ ಕೊಡುವುದನ್ನು ಬಿಟ್ಟು ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಬಹಳ ವಿರಳ.

ಅದರಲ್ಲೂ ಮಹಿಳಾ ವೈದ್ಯರಿಗಂತೂ ರೋಗಿಗಳಿಗೆ ಮತ್ತು ಕುಟುಂಬಕ್ಕೆ ಸಮಯ ಕೊಡುವುದರಲ್ಲಿಯೇ ಟೈಮ್​ ಕಳೆದುಹೋಗುತ್ತದೆ. ಇಂತಹ ಬ್ಯುಸಿ ಶೆಡ್ಯೂಲ್ ಹೊಂದಿರುವ ಮಹಿಳಾ ವೈದ್ಯರು ಮಂಗಳೂರಿನಲ್ಲಿ ಫ್ಯಾಷನ್ ಶೋನಲ್ಲಿ ಭಾಗವಹಿಸಿ ಕ್ಯಾಟ್​ವಾಕ್ ಮೂಲಕ ಗಮನ ಸೆಳೆದಿದ್ದಾರೆ.

ನಗರದ ಐಎಂಎ ಸಭಾಂಗಣದಲ್ಲಿ ಮಹಿಳಾ ವೈದ್ಯರ ಫ್ಯಾಷನ್ ಶೋ ಆಯೋಜಿಸಲಾಗಿತ್ತು.

ಮಂಗಳೂರಿನ ಪಾತ್ ವೇ ಎಂಟರ್ ಪ್ರೈಸಸ್ ಹಾಗೂ ವಿಮೆನ್ ಡಾಕ್ಟರ್ ವಿಂಗ್ ಇದರ ಸಹಯೋಗದಲ್ಲಿ ಮೆಡಿಕ್ವೆಸ್ಟ್ ಹೆಲ್ತ್ ಕೇರ್ ಪ್ರಾಯೋಜಕತ್ವದಲ್ಲಿ ಡಾಕ್ಟರ್ ಫ್ಯಾಷನ್ ರ‌್ಯಾಂಪ್ 2023 ಆಯೋಜಿಸಲಾಗಿತ್ತು.

 

20 ರಿಂದ 40 ವಯಸ್ಸಿನೊಳಗಿನ, 40 ರಿಂದ 60 ವಯಸ್ಸಿನೊಳಗಿನ ಮತ್ತು 60 ವರ್ಷ ಮೇಲ್ಪಟ್ಟ ವಯಸ್ಸಿನ ವಿಭಾಗವನ್ನು ಮಾಡಲಾಗಿತ್ತು. 60 ವರ್ಷ ಮೇಲ್ಪಟ್ಟ ವಯಸ್ಸಿನ ವಿಭಾಗದಲ್ಲಿ 5 ಮಂದಿ ಪಾಲ್ಗೊಂಡಿದ್ದು, ಇದರಲ್ಲಿ 68 ವರ್ಷ ವಯಸ್ಸಿನ ಡಾ. ಚಿತ್ರಲೇಖಾ ಶ್ರೀಯಾನ್ (ಪ್ರಸೂತಿ ತಜ್ಞೆ) ಕಿರೀಟ ಮುಡಿಗೇರಿಸಿಕೊಂಡರು.

40 ರಿಂದ 60 ವರ್ಷ ವಯಸ್ಸಿನ ವಿಭಾಗದಲ್ಲಿ 3 ಮಂದಿ‌ ಭಾಗವಹಿಸಿದ್ದು, ಫಾದರ್ ಮುಲ್ಲರ್ ಆಸ್ಪತ್ರೆಯ ಡಿಪಾರ್ಟ್​ಮೆಂಟ್ ಅಫ್ ಮೆಡಿಸಿನ್ ಪ್ರೊಫೆಸರ್ ಹಾಗೂ ಮೇರಿಹಿಲ್​ನ ಅತರ್ವ ಸ್ಪೆಷಾಲಿಟಿ ಕ್ಲಿನಿಕ್​ನ ಡಾ. ಅರ್ಚನ ಭಟ್ ಕಿರೀಟ ಮುಡಿಗೇರಿಸಿಕೊಂಡರು.

20 ರಿಂದ 40 ವರ್ಷದ ವಯಸ್ಸಿನ ವಿಭಾಗದಲ್ಲಿ 12 ಮಂದಿ ಭಾಗವಹಿಸಿದ್ದು, ಎಜೆ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ನಿಶಿತಾ ಶೆಟ್ಟಿಯಾನ್ ಫರ್ನಾಂಡಿಸ್ ಕಿರೀಟ ಮುಡಿಗೇರಿಸಿಕೊಂಡರು.

ಅಂದ ಹಾಗೇ ಡಾಕ್ಟರ್ ಫ್ಯಾಷನ್ ಶೋನಲ್ಲಿ 20 ಮಂದಿ ಮಹಿಳಾ ವೈದ್ಯರು ಭಾಗವಹಿಸಿದ್ದರು.

Share Information
Advertisement
Click to comment

You must be logged in to post a comment Login

Leave a Reply