LATEST NEWS
ಮಂಗಳೂರು : ದುರ್ಘಟನೆ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಿ- ಅಪಾಯದ ಸ್ಥಿತಿಯಲ್ಲಿ ದಸರಾ ಫ್ಲೆಕ್ಸ್..!

ಹಾದು ಹೋದ ವಿದ್ಯುತ್ ತಂತಿಗಳಿಗಿಂತ ಎತ್ತರದಲ್ಲಿ ಈ ಫ್ಲೆಕ್ಸ್ ಹಾಕಿರೋದರಿಂದ ಗಾಳಿ ಮಳೆಗೆ ವಾಲಿಕೊಂಡು ಬಿದ್ದರೆ ಫುಟ್‌ಪಾತ್ ನಲ್ಲಿ ನಡೆದುಕೊಂಡು ಹೋಗೋರು, ವಾಹನಗಳಲ್ಲಿ ಸಂಚರಿಸುವವರ ಜೀವ ಹಾನಿ ಗ್ಯಾರಂಟಿ
ಮಂಗಳೂರು : ಮಂಗಳೂರಿನಲ್ಲಿ ಐತಿಹಾಸಿಕ ದಸರಾ ಉತ್ಸವಕ್ಕೆ ಇನ್ನು ಕೆಲವೇ ದಿನಗಳು ಉಳಿದಿದ್ದು ನಗರ ಶೃಂಗಾರದ ಕಾರ್ಯಗಳು ಭರದಿಂದ ಸಾಗುತ್ತಿವೆ.

ನಗರದ ಅನೇಕ ಕಡೆ ಶುಭ ಕೋರುವ ಬೃಹತ್ ಫ್ಲೆಕ್ಸ್ ಗಳು ರಾರಾಜಿಸುತ್ತಿದ್ದು ಇದರಲ್ಲಿ ಲೇಡಿಹಿಲ್ ಬಳಿ ಹಾಕಿದ್ದ ಬೃಹತ್ ಫ್ಲೆಕ್ಸ್ ಅಪಾಯಕ್ಕೆ ಆಹ್ವಾನ ನೀಡುತ್ತಿದೆ
. ಲೇಡಿಹಿಲ್ ಪೆಟ್ರೋಲ್ ಪಂಪ್ ಮುಂಭಾದಲ್ಲಿ ಅಳವಡಿಸಲಾಗಿದ್ದ ಬೃಹತ್ ಫೆಕ್ಸ್ ವಿದ್ಯುತ್ ತಂತಿಗಳ ಸನಿಹದಲ್ಲೇ ಅಳವಡಿಸಿದ್ದು ಅಪಾಯವನ್ನು ಅಹ್ವಾನಿಸುತ್ತಿದೆ.
ಇಲ್ಲಿ ಹಾದು ಹೋದ ವಿದ್ಯುತ್ ತಂತಿಗಳಿಗಿಂತ ಎತ್ತರದಲ್ಲಿ ಈ ಫ್ಲೆಕ್ಸ್ ಹಾಕಿರೋದರಿಂದ ಗಾಳಿ ಮಳೆಗೆ ವಾಲಿಕೊಂಡು ಬಿದ್ದರೆ ಫುಟ್‌ಪಾತ್ ನಲ್ಲಿ ನಡೆದುಕೊಂಡು ಹೋಗೋರು, ವಾಹನಗಳಲ್ಲಿ ಸಂಚರಿಸುವವರ ಜೀವ ಹಾನಿ ಗ್ಯಾರಂಟಿ.
ಅದೂ ಅಲ್ಲದೇ ದಸರಾ ಮೆರವಣಿಗೆ ಸಾಗುವ ಸಂದರ್ಭ ಈ ಭಾಗದಲ್ಲಿ ಅಪಾರ ಜನ ಸಂದಣಿ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ ಅಳವಡಿಸಿದ ಕಂಬಗಳು ವಾಲಿ ಭಾರಿ ಅನಾಹುತ ಸಂಭವಿಸುವ ಸಾಧ್ಯತೆಗಳಿದ್ದುಅನಾಹುತ ಸಂಭವಿಸುವ ಮುನ್ನ ಇದನ್ನು ತೆರವು ಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.