Connect with us

LATEST NEWS

ಮಂಗಳೂರು : ಕುಲಶೇಖರದಲ್ಲಿ 2 ಬೈಕುಗಳ ಮಧ್ಯೆ ಅಫಘಾತ, ರಸ್ತೆಗೆಸೆಯಲ್ಪಟ್ಟ ಸವಾರನ ಮೇಲೆ ಹರಿದ ಬಸ್..!

ಮಂಗಳೂರು :  ಎರಡು ಬೈಕ್‌ಗಳ ಮಧ್ಯೆ ಅಪಘಾತ ಸಂಭವಿಸಿದ ವೇಳೆ ಬಸ್ಸೊಂದು ಹರಿದ ಪರಿಣಾಮ ಬೈಕೊಂದರ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಮಂಗಳೂರು ನಗರದ ಕುಲಶೇಖರ ಬಳಿ ನಡೆದಿದೆ.

ಮೃತ ಬೈಕ್ ಸವಾರನನ್ನು ಚಂದನ್(20) ಎಂದು ಗುರುತಿಸಲಾಗಿದೆ. ಕುಲಶೇಖರ ಸೆಕ್ರೇಡ್ ಹಾರ್ಟ್ ಶಾಲೆಯ ಬಳಿ ಎರಡು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿತ್ತು. ಈ ವೇಳೆ ಬೈಕ್ ಸವಾರ ಚಂದನ್ ರಸ್ತೆಗೆ ಎಸೆಯಲ್ಪಟ್ಟಿದ್ದು, ಈ ವೇಳೆ ಆತನ ಮೇಲೆ ಸಂಚರಿಸುತ್ತಿದ್ದ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಸಂಚಾರ ದಕ್ಷಿಣ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಚೇತನ್ ಕುಮಾರು ರವರು ಬೆಳಿಗ್ಗೆ ಬೈಕು ನೊಂದಣಿ ಸಂಖ್ಯೆ: KA-19-EJ-4072 ನೇಯದರಲ್ಲಿ ಲತೀಶ್ ಎಂಬುವರನ್ನು ಹಿಂಬದಿ ಸವಾರರನ್ನಾಗಿ ಕರೆದುಕೊಂಡು ಕುಲಶೇಖರ ಕಡೆಯಿಂದ ವಾಮಂಜೂರು ಕಡೆಗೆ ಹೋಗುತ್ತಿರುವಾಗ ಸಮಯ 9-43 ಗಂಟೆಗೆ ಸ್ರಾಕೇಡ್ ಹಾರ್ಟ್ ಶಾಲೆಯ ಎದುರು ತಲುಪುತ್ತಿದ್ದಂತೆ ವಾಮಂಜೂರು ಕಡೆಯಿಂದ ಕುಲಶೇಖರ ಕಡೆಗೆ ಬರುತ್ತಿದ್ದ ಖಾಸಗಿ ಬಸ್ಸು ನೊಂದಣಿ ಸಂಖ್ಯೆ: KA-20-AA-8844 ನೇಯದನ್ನು ಅದರ ಚಾಲಕ ಪ್ರಮೋದ್ ಎಸ್ ಎಂಬಾತನು ತನ್ನ ಬಲ ಬದಿಯಿಂದ ಓವರ್ ಟೇಕ್ ಮಾಡುವ ವಾಹನಗಳನ್ನು ಗಮನಿಸಿಯೂ ಕೂಡ ಬಸ್ಸನ್ನು ನಿಧಾನಗೊಳಿಸದೇ ನಿರ್ಲಕ್ಷ್ಯತನದಿಂದ ಚಲಾಯಿಸುತ್ತಾ ವೇಗವನ್ನು ಹೆಚ್ಚಿಸಿದ್ದು ಆ ಸಮಯ ಬಸ್ಸನ್ನು ಬಲ ಬದಿಯಿಂದ ಓವರ್ಟೇಕ್ ಮಾಡುತ್ತಿದ್ದ ಮೋಟಾರ್ ಸೈಕಲ್ ನೊಂದಣಿ ಸಂಖ್ಯೆ: KA-12-W-9611 ನೇಯದನ್ನು ಅದರ ಸವಾರ ಚಂದನ್ (20 ವರ್ಷ) ಎಂಬಾತನು ಬಸ್ಸನ್ನು ಓವರ್ಟೇಕ್ ಮಾಡುವ ಗಡಿಬಿಡಿಯಲ್ಲಿ ಬೈಕನ್ನು ನಿಯಂತ್ರಿಸದೇ ಅಜಾಗರೂಕತೆಯಿಂದ ಚಲಾಯಿಸಿ ಚೇತನ್ ಕುಮಾರು ರವರು ಚಲಾಯಿಸುತ್ತಿದ್ದ ಬೈಕಿನ ಬಲ ಬದಿಗೆ ಢಿಕ್ಕಿ ಪಡಿಸಿದ್ದು ಈ ಢಿಕ್ಕಿ ರಭಸಕ್ಕೆ ಢಿಕ್ಕಿ ಪಡಿಸಿದ ಬೈಕ್ ಸವಾರನು ಎಡಕ್ಕೆ ಬಿದ್ದಿದ್ದು ಅದೇ ವೇಳೆ ಬಸ್ಸಿನ ಬಲ ಹಿಂಭಾಗದ ಚಕ್ರವು ಬೈಕ್ ಸವಾರ ಚಂದನ್ ತಲೆಯ ಮೇಲೆ ಚಲಿಸಿ ಚಂದನ್ ರವರ ತಲೆಯು ಹೆಲ್ಮೆಟ್ ಸಹಿತ ಒಡೆದು ಮೆದಳು ಹೊರಚೆಲ್ಲಿ ಚಂದನ್ ರವರು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಅ.ಕ್ರ 140/2024 ಕಲಂ 281, 106(1) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *