LATEST NEWS
ರೀಲ್ಸ್ ಗಾಗಿ ಜನನಿಬಿಡ ರಸ್ತೆಯಲ್ಲಿ ತುಂಡುಡುಗೆಯಲ್ಲಿ ಯುವತಿಯ ವಾಕಿಂಗ್ – ಪ್ರಕರಣ ದಾಖಲು
ಇಂದೋರ್ ಸೆಪ್ಟೆಂಬರ್ 27: ಜನ ರೀಲ್ಸ್ ಗಾಗಿ ಏನೆನೆಲ್ಲಾ ಮಾಡುತ್ತಾರೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ. ಯುವತಿಯೊಬ್ಬಳು ಪಬ್ಲಿಕ್ ರಿಯಾಕ್ಷನ್ ಎಂಬ ಹೆಸರಿನಲ್ಲಿ ತುಂಡು ಉಡುಗೆಯಲ್ಲಿ ನಡು ರಸ್ತೆಯಲ್ಲಿ ವಾಕಿಂಗ್ ಮಾಡಿದ ಘಟನೆ ಇಂದೊರ್ ನಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆದ ಬೆನ್ನಲ್ಲೆ ಯುವತಿಯ ವಿರುದ್ದ ಪ್ರಕರಣ ದಾಖಲಾಗಿದೆ.
ಮೇಘದೂತ ಚಾಟ್ -ಚೌಪಾಟಿ ಮತ್ತು 56 ದುಕಾನ್ ಚಾಟ್-ಚೌಪಾಟಿ ಫುಡ್ ಸ್ಟ್ರೀಟ್‌ನಲ್ಲಿ ಸುತ್ತಾಡುತ್ತಿರುವ ವಿಡಿಯೊಗಳನ್ನು ಯುವತಿ ‘Public Reaction‘ ಎಂಬ ಶೀರ್ಷಿಕೆಯಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದರು. ಹಿಂದಿಯಲ್ಲಿ ಮಾತನಾಡಿರುವ ಆಕೆ ತಾನು ದುಬೈ ನಿವಾಸಿ ಎಂದು ಹೇಳಿಕೊಂಡಿದ್ದಳು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿದಾಡುತ್ತಿದ್ದಂತೆ ಆಡಳಿತಾರೂಢ ಬಿಜೆಪಿ, ಬಜರಂಗದಳ ಮತ್ತು ಇತರ ಸಂಘಟನೆಗಳ ಮುಖಂಡರು ಯುವತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದರು.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 296 (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕೃತ್ಯ) ಅಡಿಯಲ್ಲಿ ಯುವತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತುಕೋಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ಜಿತೇಂದ್ರ ಸಿಂಗ್ ಯಾದವ್ ತಿಳಿಸಿದ್ದಾರೆ. ಬಳಿಕ ಯುವತಿ ಕ್ಷಮೆಯಾಚಿಸಿದ್ದು, ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಿಂದ ವಿಡಿಯೊಗಳನ್ನು ಡಿಲೀಟ್ ಮಾಡಿದ್ದಾರೆ.
इंदौर में लड़की ने पहले अश्लील कपड़े पहन बनाई रील..
– वीडियो वायरल होने के बाद माफी मांग रही युवती.#MadhyaPradesh #Indore #viralvideo #Reel #Nedricknews pic.twitter.com/ZqiJ6NojkW— Nedrick News (@nedricknews) September 26, 2024
You must be logged in to post a comment Login