LATEST NEWS
ಮಂಗಳೂರು : ಡಾ. ಯು.ಎಸ್. ಕೃಷ್ಣ ನಾಯಕ್ ನಿಧನ
ಮಂಗಳೂರು: ಎ.ಬಿ.ಶೆಟ್ಟಿ ಮೊಮೋರಿ ಯಲ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್‌ನ ಪ್ರಿನ್ಸಿಪಾಲ್ ಡೀನ್ ಹಾಗೂ ನಾಯಕ್ ಸ್ಪೆಷಾಲಿಟಿ ಕ್ಲಿನಿಕ್‌ನ ನಿರ್ದೇಶಕ ರಾಗಿರುವ ಪ್ರೊಫೆಸರ್ ಡಾ.ಯು.ಎಸ್. ಕೃಷ್ಣ ನಾಯಕ್ ನಿಧನರಾಗಿದ್ದಾರೆ.
64 ವರ್ಷದ ಅವರು ಅಲ್ಪಕಾಲದ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳ ವಾರ ರಾತ್ರಿ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿ ಮತ್ತು ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.
2003ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2002ರಲ್ಲಿ ರಾಜೀವ್ ಗಾಂಧಿ ಹೂಮನ್ ಎಕ್ಸಲೆನ್ಸ್ ಅವಾರ್ಡ್, 2014ರಲ್ಲಿ ಔಟ್ ಸ್ಟ್ಯಾಂಡಿಂಗ್ ಪ್ರೊಫೆಸರ್ ಅವಾರ್ಡ್ ಕೂಡ ಪಡೆದಿದ್ದಾರೆ. 2024ರ ಸೆ.20, 21ರಂದು ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಐಒಎಸ್ ಕಾನ್ಸರೆನ್ಸ್‌ನಲ್ಲಿ ಪ್ರತಿಷ್ಠಿತ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ಕೂಡ ಗಳಿಸಿದ್ದರು. ಡಾ.ಯು.ಎಸ್. ಕೃಷ್ಣ ನಾಯಕ್ ಅವರ ಅಕಾಲಿಕ ನಿಧನಕ್ಕೆ ವೈದ್ಯಕೀಯ ರಂಗದ ಪ್ರಮುಖರು, ಸಮಾಜದ ಗಣ್ಯರು ಕಂಬನಿ ಮಿಡಿದಿದ್ದಾರೆ.