Connect with us

LATEST NEWS

18ನೇ ವಯಸ್ಸಿಗೆ ಕಮರ್ಷಿಯಲ್ ಪೈಲಟ್ ಆದ ಗುಮ್ಮಟ ನಗರಿ ಯುವತಿ, ಅತ್ಯಂತ ಕಿರಿಯ ಪೈಲೆಟ್ ಹೆಗ್ಗಳಿಕೆಗೆ ಪಾತ್ರರಾದ ಸಮೈರಾ ಹುಲ್ಲೂರು..! 

ವಿಜಯಪುರ : ಗುಮ್ಮಟ ನಗರಿ ವಿಜಯಪುರ ಜಿಲ್ಲೆಯ ಯುವತಿ ಸಮೈರಾ ಹುಲ್ಲೂರ ತಮ್ಮ 18ನೇ ವಯಸ್ಸಿಗೆ ಕಮರ್ಶಿಯಲ್ ಪೈಲಟ್ ಲೈಸೆನ್ಸ್ (CPL) ಪಡೆಯುವ ಮೂಲಕ ದೇಶದ ಅತ್ಯಂತ ಕಿರಿಯ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ.

ಈ ಮೂಲಕ ತಾತ, ಅಜ್ಜಿ, ತಂದೆ, ತಾಯಿ ಹಾಗೂ ತಮ್ಮ ಎಲ್ಲರ ಸಂಭ್ರಮಕ್ಕೆ ಕಾರಣರಾಗಿರುವುದರ ಜೊತೆಗೆ ಊರಿಗೆ ಕೀರ್ತಿ ದಂದಿದ್ದಾಳೆ. . ಸಮೈರಾಳ ಅಭೂತಪೂರ್ವ ಸಾಧನೆಯಿಂದ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

ವಿಜಯಪುರ ಜಿಲ್ಲೆಯ ಗೋಲಗುಮ್ಮಟ ಸಮೀಪದ ಅಮೀನ್ ಹುಲ್ಲೂರು-ನಾಝಿಯಾ ಹುಲ್ಲೂರು ದಂಪತಿಯ ಮಗಳು ಸಮೈರಾ ಹುಲ್ಲೂರು ಈ ದಾಖಲೆ ಮಾಡಿದ ಯುವ ಪ್ರತಿಭೆ.

ಸಮೈರಾ ತನ್ನ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಾಲೆಯ ವಿದ್ಯಾಭ್ಯಾಸವನ್ನ ವಿಜಯ ಪುರದಲ್ಲಿ ಪೂರ್ಣಗೊಳಿಸಿದ್ದು, ನಂತರ ದೆಹಲಿಯಲ್ಲಿ 6 ತಿಂಗಳ ಪೈಲಟ್ ತರಬೇತಿಯನ್ನು ಮುಗಿಸಿದ್ದಳು.  25ನೇ ವರ್ಷಕ್ಕೆ ಪೈಲಟ್ ಆಗಿರುವ ಕ್ಯಾಪ್ಟನ್ ತಪೇಶ್ ಕುಮಾರ್ ಅವರೇ ನನಗೆ ಪ್ರೇರಣೆ ಎಂದು ಸಮೈರಾ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾಳೆ. ಇದೀಗ ಸಮೈರಾ 18ನೇ ವರ್ಷಕ್ಕೆ ಪೈಲಟ್ ಆಗುವ ಮೂಲಕ ತಪೇಶ್ ಅವರನ್ನು ಮೀರಿಸಿದ್ದಾರೆ.

ಸಮೈರಾಳ ಸಾಧನೆಗೆ ಜಿಲ್ಲೆ, ರಾಜ್ಯ ಹಾಗೂ ದೇಶದ ಹಲವಡೆಯಿಂದ ಶುಭಾಶಯಗಳು ಹರಿದು ಬರುತ್ತಿವೆ. ಹೆಣ್ಣು ಮಕ್ಕಳೆಂದರೆ ಕಡೆಗಣಿಸುವವರಿಗೆ ಸಮೈರಾ ಕುಟುಂಬ ಹಾಗೂ ಇಂದಿನ ಯುವ ಪೀಳಿಗೆಗೆ ಸಮೈರಾ ಸಾಧನೆ ಮಾದರಿ ಆಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *