LATEST NEWS
ಮಾನವೀಯತೆ ಮರೆತ ಮಂಗಳೂರು ಪೊಲೀಸರು – ಝಿರೋ ಟ್ರಾಫಿಕ್ ಗೆ ಅಸಹಕಾರ ತೋರಿದರು.
ಮಾನವೀಯತೆ ಮರೆತ ಮಂಗಳೂರು ಪೊಲೀಸರು – ಝಿರೋ ಟ್ರಾಫಿಕ್ ಗೆ ಅಸಹಕಾರ ತೋರಿದರು.
ಮಂಗಳೂರು ಡಿಸೆಂಬರ್ 21: ಗಂಭೀರ ಯಕೃತ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಯೊಬ್ಬಳನ್ನು ಚಿಕಿತ್ಸೆಗೆ ತೆರಳಲು ರಾಜ್ಯದಲ್ಲಿಯೇ ಅತಿ ಉದ್ದದ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿಯ ಬೈಂದೂರು ತಾಲೂಕು ಶಿರೂರಿನ 6ನೇ ತರಗತಿ ವಿದ್ಯಾರ್ಥಿನಿ ಅನುಶಾ ಗಂಭೀರ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು.
ಈ ಹಿನ್ನಲೆಯಲ್ಲಿ ಈ ಕೂಡಲೇ ಹೆಚ್ಚಿನ ಚಿಕಿತ್ಸೆಗೆ ಅನುಶಾಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವ ಅನಿವಾರ್ಯತೆ ಸೃಷ್ಠಿಯಾಗಿತ್ತು.
ಆದರೆ ಉಡುಪಿಯ ಪೊಲೀಸರ ಸಹಕಾರದಿಂದ ಝಿರೋ ಟ್ರಾಫಿಕ್ ವ್ಯವಸ್ಥೆಯಡಿ ಬಂದ ಅಂಬ್ಯುಲೆನ್ಸ್ ಗೆ ಮಂಗಳೂರು ಪೊಲೀಸರು ಅಸಹಕಾರ ತೋರಿಸಿದ್ದಾರೆ.
ಬೈಂದೂರಿನಿಂದ ಮಂಗಳೂರು ವಿಮಾನ ನಿಲ್ದಾಣ ತಲುಪಲು ವೇಗವಾಗಿ ಬಂದ ಅಂಬ್ಯುಲೆನ್ಸ್ ಉಡುಪಿ ಮಂಗಳೂರು ಗಡಿಯಿಂದ ಸಾಮಾನ್ಯ ಟ್ರಾಫಿಕ್ ನಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಬೇಕಾದ ಪರಿಸ್ಥಿತಿ ಬಂದಿತ್ತು.
ಬೆಂಗಳೂರಿಗೆ ತೆರಳಬೇಕಾದ ವಿಮಾನ ತಯಾರಾಗಿದ್ದರೂ ಮಂಗಳೂರು ಪೊಲೀಸರ ಅಸಹಕಾರ ಅಂಬ್ಯುಲೆನ್ಸ್ ವಿಮಾನ ನಿಲ್ದಾಣ ತಲುಪಲ್ಲಿ ವಿಳಂಬ ಉಂಟುಮಾಡಿತ್ತು.
ಉಡುಪಿ ಪೊಲೀಸರಿಗಿದ್ದ ಮಾನವೀಯತೆ ಮಂಗಳೂರಿನ ಪೊಲೀಸರಲ್ಲಿ ಇಲ್ಲವಾಗಿತ್ತು.
ಘಟನೆಯ ವಿವರ
ಬೈಂದೂರಿನ ಅರೆ ಶಿರೂರಿನ ಶಿಕ್ಷಕಿ ಅವರ ಪುತ್ರಿಯಾಗಿರುವ ಅನುಶಾ ಅವಳನ್ನು ತುರ್ತಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಬೇಕಾದ ಅನಿವಾರ್ಯತೆ ಸೃಷ್ಠಿಯಾದ ಹಿನ್ನಲೆಯಲ್ಲಿ ಬೈಂದೂರಿನ ಅರೆ ಶಿರೂರಿನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆ ತರಬೇಕಾಗಿತ್ತು.
ಬಾಲಕಿಯ ಪ್ರಾಣ ರಕ್ಷಣೆಗೆ ಅಣಿಯಾದ ಉಡುಪಿ ಜಿಲ್ಲಾ ಪೊಲೀಸರು ಅರೆಶಿರೂರಿನಿಂದ ಉಡುಪಿ- ಮಂಗಳೂರು ಗಡಿಯವರೆಗೆ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು.
ಈ ಹಿನ್ನಲೆಯಲ್ಲಿ ಉಡುಪಿ ಕಾರ್ಮಿಕ ವೇದಿಕೆ ಅಧ್ಯಕ್ಷ ರವಿ ಶೆಟ್ಟಿ ಅನಾರೋಗ್ಯ ಪೀಡಿತೆಯನ್ನು ಬೆಂಗಳೂರಿಗೆ ರವಾನೆ ಮಾಡುವ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು.
ಸುಮಾರು 140 ಕಿಲೋ ಮೀಟರ್ ದೂರದವರೆಗ ಝಿರೋ ಟ್ರಾಫಿಕ್ ನಲ್ಲಿ ಪೊಲೀಸ್ ಬೆಂಗಾವಲು ಹಾಗೂ ಪೈಲೆಟ್ ವಾಹನ ಭದ್ರತೆಯಲ್ಲಿ ಅಂಬುಲೆನ್ಸ್ ಅನುಶಾಳನ್ನು ಅತೀ ವೇಗದಲ್ಲಿ 1 ಗಂಟೆಯ ಜೆಟ್ ಏರ್ ವೆಸ್ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಅನುಶಾಳನ್ನು ರವಾನೆ ಮಾಡಲಾಯಿತು.
ಹೆಬ್ಬಾಳದ ಆಸ್ಟರ್ ಆಸ್ಪತ್ರೆಯಲ್ಲಿ ಅನುಶಾಳ ಆಪರೇಶನ್ ಗೆ ವ್ಯವಸ್ಥೆ ಮಾಡಲಾಗಿತ್ತು.
ಬೆಂಗಳೂರಿನ ವೈದ್ಯರು ಉಡುಪಿಗೆ ಬಂದು ಶಸ್ತ್ರ ಚಿಕಿತ್ಸೆ ಮಾಡಲು 48 ಗಂಟೆ ತಗಲುವುದರಿಂದ ವೈದ್ಯರು ಅನುಶಾಳನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು.
ಮಂಗಳೂರಿನಲ್ಲಿ ಸಾಮಾನ್ಯ ಟ್ರಾಫಿಕ್ ನಲ್ಲಿ ತೆರಳಿದ ಅಂಬ್ಯುಲೆನ್ಸ್
ಬೈಂದೂರಿನಿಂದ ಕುಂದಾಪುರ ಉಡುಪಿ , ಪಡುಬಿದ್ರೆ ಮಾರ್ಗವಾಗಿ ಮುಲ್ಕಿಯವರೆಗೆ ಉಡುಪಿ ಜಿಲ್ಲಾ ಪೊಲೀಸರು ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು.
ಆದರೆ ಉಡುಪಿ ಗಡಿದಾಟಿ ಮಂಗಳೂರು ಪ್ರವೇಶಿಸುತ್ತಿದ್ದಂತೆ ಆಂಬುಲೆನ್ಸ್ ತೆರಳಲು ಸಮಸ್ಯೆ ಎದುರಾಗಿದೆ.
ಮಂಗಳೂರು ಪೊಲೀಸ್ ಕಮೀಷನರೆಟ್ ವ್ಯಾಪ್ತಿಯಲ್ಲಿ ಪೊಲೀಸರು ಬಾಲಕಿಯ ಚಕಿತ್ಸೆಗೆ ಅಸಹಕಾರಿ ತೋರಿ ಅಮಾನವೀಯವಾಗಿ ವರ್ತಿಸಿದ್ದಾರೆ.
ಮುಲ್ಕಿಯಿಂದ ಮಂಗಳೂರು ಬಜಪೆ ವಿಮಾನ ನಿಲ್ದಾಣಕ್ಕೆ ಅಂಬ್ಯುಲೆನ್ಸ್ ತೆರಳಲು ಭಾರಿ ಸಮಸ್ಯೆ ಎದುರಿಸಿದೆ.
ಉಡುಪಿ ಪೊಲೀಸರು ಅಂಬ್ಯುಲೆನ್ಸ್ ಸಾಗಲು ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದರೆ, ಮಂಗಳೂರು ಪೊಲೀಸರು ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡದೇ ಅಸಹಕಾರ ತೋರಿದ್ದಾರೆ.
ಈ ಪರಿಣಾಮ ಮಾಮೂಲಿಯಂತೆ ಟ್ರಾಫಿಕ್ ರಸ್ತೆಲ್ಲಿ ಅಂಬ್ಯುಲೆನ್ಸ್ ಸಂಚಾರಕ್ಕೆ ಕಿರಿಕಿರಿ ಯಾಗಿದೆ.
ವೇಗವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಬೇಕಾಗದ್ದ ಅಂಬ್ಯುಲೆನ್ಸ್ ತಡವಾಗಿ ವಿಮಾನ ನಿಲ್ದಾಣ ತಲುಪಿದೆ.
ಮಂಗಳೂರು ಪೊಲೀಸರ ಈ ವರ್ತನೆ ಜನರಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಅಮಾನವೀಯವಾಗಿ ವರ್ತಿಸಿದ ಮಂಗಳೂರು ಪೊಲೀಸರ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ.
ಬಾಲಕಿಯ ಪ್ರಾಣ ರಕ್ಷಣೆಗೆ ಮುಂದಾಗಬೇಕಿದ್ದ ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್ ಸುರೇಶ್ ತಮ್ಮ ವ್ಯಾಪ್ತಿಯಲ್ಲಿ ಝಿರೋ ಟ್ರಾಫಿಕ್ ಗೆ ವ್ಯವಸ್ಥೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ.