LATEST NEWS
ಮಂಗಳೂರು : ನಂತೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ದೇವ ವನ ಪಾರ್ಕ್ ಲೋಕಾರ್ಪಣೆ..!

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಉತ್ತರ ವಾರ್ಡ್ 32 ರ ನಂತೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ದೇವ ವನ ಪಾರ್ಕ್ ಶಾಸಕ ವೇದವ್ಯಾಸ ಕಾಮತ್ ಅವರ ಘನ ಉಪಸ್ಥಿತಿಯಲ್ಲಿ, ಶ್ರೀ ವಿಠಲ ಶೆಣೈಯವರಿಂದ ಉದ್ಘಾಟನೆಗೊಂಡಿತು.
ಉದ್ಘಾಟನೆಯ ನಂತರ ಮಾತನಾಡಿದ ಶಾಸಕರು, ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 18 ಲಕ್ಷ ರೂ. ಅನುದಾನದಲ್ಲಿ ಈ ಪಾರ್ಕ್ ಅಭಿವೃದ್ಧಿಗೊಂಡಿದ್ದು ಸ್ಥಳೀಯ ಮ.ನ.ಪಾ ಸದಸ್ಯರಾದ ಶ್ರೀಮತಿ ಶಕೀಲ ಕಾವ ರವರ ವಿಶೇಷ ಮುತುವರ್ಜಿಯಿಂದ ಶೀಘ್ರದಲ್ಲಿ ಕಾಮಗಾರಿ ಮುಗಿದು ಸಾರ್ವಜನಿಕ ಬಳಕೆಗೆ ಲಭ್ಯವಾಗಿದೆ. ಇನ್ನು ಮೇಲೆ ಇಲ್ಲಿನ ಸುಂದರ ಪರಿಸರವನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದರು.

ಈ ಸಂದರ್ಭದಲ್ಲಿ ಮಂಡಲದ ಉಪಾಧ್ಯಕ್ಷರಾದ ಮಂಗಳ ಆಚಾರ್ಯ, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕಮಲಾಕ್ಷಿ, ಬೂತ್ ಕಾರ್ಯದರ್ಶಿ ಸಂತೋಷ್, ಬಸ್ತಿ ಪುರುಷೋತ್ತಮ ಶೆಣೈ, ಶ್ರೀಪಾದ ಶೆಣೈ, ಶಿವಪ್ಪ ನಂತೂರು, ರವೀಂದ್ರ ನಂತೂರು, ಸದಾನಂದ ಪ್ರಭು, ಕುಸುಮ ದೇವಾಡಿಗ, ಕೃಷ್ಣ ಭಟ್, ಗಣೇಶ್ ಮಲ್ಯ, ಸುಪ್ರೀತಾ, ಚೇತನಾ, ನಿರ್ಮಲ, ಆಶಾಲತಾ, ಬೇಬಿ, ಶಿಲ್ಪ, ಉಮ ಕಂಡೆಟ್ಟು, ಸಿಂಚನ, ಶಮಿನ, ವಿಜಯ ಶಣೈ, ಉಮಾ ಶೆಟ್ಟಿ, ನಿಶಿತ, ಯಶೋಧ, ಜ್ಯೋತಿ ನಂತೂರು, ಉಪೇಂದ್ರ ಕಂಡೆಟ್ಟು, ಯಮುನಾ, ಗುಣವತಿ, ಗೀತಾ, ಶೋಭ, ಉರ್ಮಿಳ, ಕೃಷ್ಣಮ್ಮ, ಗುಲಾಬಿ ಮತ್ತು ಅನೇಕ ಸ್ಥಳೀಯರು ಉಪಸ್ಥಿತರಿದ್ದರು.