Connect with us

LATEST NEWS

ಮಂಗಳೂರು : ಬೆಂಗ್ರೆ ಜನತೆಯ ನಾಲ್ಕು ದಶಕಗಳ ಸಮಸ್ಯೆಗೆ ಪರಿಹಾರ ನೀಡಿದ ಶಾಸಕ ವೇದವ್ಯಾಸ್ ಕಾಮತ್

ಮಂಗಳೂರು :  ಮಂಗಳೂರಿನ ಬೆಂಗ್ರೆ ಪರಿಸರದ ಸುಮಾರು 600 ಕುಟುಂಬಗಳಿಗೆ 1994 ನೇ ಇಸವಿಯಲ್ಲಿ ಕೊಡಲಾಗಿದ್ದ ಹಕ್ಕುಪತ್ರಗಳಲ್ಲಿ ಚೆಕ್ ಬಂದಿ ಹಾಗೂ ಸರ್ವೇ ನಂಬರ್ ಇಲ್ಲದಂತಹ ಮನೆಗಳಿಗೆ ಹೊಸದಾಗಿ ತಿದ್ದುಪಡಿ ಮಾಡಿ 2023 ರ ಜನವರಿ-ಫೆಬ್ರವರಿ ವೇಳೆ ನನ್ನ ನೇತೃತ್ವದಲ್ಲಿ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗಿದ್ದು ನಂತರದ ದಿನಗಳಲ್ಲಿ ಸ್ಥಗಿತಗೊಂಡಿದ್ದ ಮುಂದಿನ ಪ್ರಕ್ರಿಯೆಗಳು ಈಗ ಮತ್ತೆ ಚಾಲನೆಗೊಂಡಿವೆ ಮತ್ತು ಶೀಘ್ರದಲ್ಲಿ ಎಲ್ಲರಿಗೂ ಸಿಹಿ ಸುದ್ದಿ ಲಭಿಸಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಹೇಳಿದ್ದಾರೆ.

ಕಳೆದ ವರ್ಷ ಹಕ್ಕುಪತ್ರಗಳನ್ನು ಪಡೆದುಕೊಂಡಿದ್ದ 600 ಕುಟುಂಬಗಳು ನಿರಪೇಕ್ಷಣಾ ಪತ್ರಕ್ಕಾಗಿ (ಎನ್ ಒ ಸಿ) ಮಂಗಳೂರಿನ ಕಂದಾಯ ಇಲಾಖೆಗೆ ಅರ್ಜಿಯನ್ನು ಸಲ್ಲಿಸಿದ ಸಂದರ್ಭದಲ್ಲಿ ಚುನಾವಣೆಗಳು ಎದುರಾಗಿ ಎಲ್ಲಾ ಪ್ರಕ್ರಿಯೆಗಳು ಸ್ಥಗಿತಗೊಂಡಿದ್ದವು. ಇದೀಗ ಮತ್ತೆ ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಸಭೆಯನ್ನು ನಡೆಸಲಾಗಿದೆ. 600 ಮನೆಗಳಿಗೆ ಹಕ್ಕು ಪತ್ರ ಕೊಟ್ಟ ನಂತರ ನಿರಪೇಕ್ಷಣಾ ಪತ್ರ (ಎನ್ ಒ ಸಿ) ಕೊಡದೇ ವಿಳಂಬ ನೀತಿ ಅನುಸರಿಸುವುದು ಯಾವುದೇ ಕಾರಣಕ್ಕೂ ಸಮ್ಮತವಲ್ಲ. ಹಾಗಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಗಳೂರಿಗೆ ಆಗಮಿಸಿದ್ದಾಗ ಈ ವಿಚಾರವನ್ನು ಗಮನಕ್ಕೆ ತಂದಿದ್ದಲ್ಲದೇ, ಎರಡೆರಡು ಬಾರಿ ಅಧಿವೇಶನದಲ್ಲೂ ಪ್ರಸ್ತಾಪಿಸಿ ಕಂದಾಯ ಸಚಿವರ ಗಮನಕ್ಕೂ ತರಲಾಗಿತ್ತು.

#REALWARFIGHTER brigadier I N Rai ‘ದೇಶಕ್ಕಾಗಿ ತ್ಯಾಗ ಮಾಡಿದವರ ಮುಂದೆ ನಾನು ಕಿರಿಯ’…! episode 1

ಜೊತೆಗೆ ಕಂದಾಯ ಇಲಾಖೆಯ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳ ಜೊತೆಯಲ್ಲೂ ಚರ್ಚೆ ನಡೆಸಲಾಗಿದ್ದು ಇದೀಗ ನಿರಂತರ ಪ್ರಯತ್ನದ ಫಲವಾಗಿ ಶೀಘ್ರದಲ್ಲೇ ನಿರಪೇಕ್ಷಣಾ ಪತ್ರ ಲಭಿಸಲಿದೆ. ಕೂಡಲೇ ಗ್ರಾಮ ಲೆಕ್ಕಾಧಿಕಾರಿಯವರ ಕಚೇರಿಯನ್ನು ಸಂಪರ್ಕಿಸಿ ನಿರಪೇಕ್ಷಣಾ ಪತ್ರವನ್ನು (ಎನ್ ಒ ಸಿ) ಪಡೆದುಕೊಂಡು ಅದನ್ನು ಮಂಗಳೂರು ಮಹಾನಗರ ಪಾಲಿಕೆಗೆ ಸಲ್ಲಿಸಿ ಖಾತಾವನ್ನು ಪಡೆದುಕೊಳ್ಳುವಂತೆ ಶಾಸಕರು ಪ್ರಕಟಣೆಯಲ್ಲಿ ತಿಳಿಸಿದರು.

ಇನ್ನು ಈ ಪರಿಸರದ ಉಳಿದ ಸುಮಾರು 200ಕ್ಕೂ ಅಧಿಕ ಕುಟುಂಬಗಳು 1994ನೇ ಇಸವಿಯಲ್ಲಿ ಹಕ್ಕು ಪತ್ರವನ್ನು ಪಡೆದುಕೊಳ್ಳುವಾಗ ಸರ್ಕಾರಕ್ಕೆ ಹಣ ಪಾವತಿ ಮಾಡಿದ ಬಗ್ಗೆ ದಾಖಲೆಗಳು ಲಭ್ಯವಿಲ್ಲದೇ ತಾಂತ್ರಿಕ ದೋಷವುಂಟಾಗಿತ್ತು. ಹಾಗಾಗಿ ಅವರೆಲ್ಲರೂ ಮತ್ತೆ ಸರ್ಕಾರಕ್ಕೆ ಹಣವನ್ನು ಪಾವತಿಸಬೇಕಾಗಿ ನೂತನ ಸರ್ಕಾರ ಆದೇಶ ಹೊರಡಿಸಿದ್ದು ಈ ಬಗ್ಗೆ ನನ್ನ ಆಕ್ಷೇಪವಿದ್ದು, 94ನೇ ಇಸವಿಯಲ್ಲೇ ಅವರೆಲ್ಲರೂ ಹಕ್ಕುಪತ್ರ ಪಡೆದುಕೊಂಡಿದ್ದಾರೆ ಎಂದರೆ ಸರ್ಕಾರದ ನೀತಿ ನಿಯಮಗಳನ್ನು ಪಾಲಿಸಿದ್ದಾರೆ ಎಂದರ್ಥ. ಈಗ ಸರ್ಕಾರ ಕೊಡುತ್ತಿರುವುದು ಹೊಸ ಹಕ್ಕುಪತ್ರವಲ್ಲ. ಹಾಗಾಗಿ ಈ ಹಿಂದಿನ ಹಕ್ಕು ಪತ್ರ ಪಡೆಯಲು ಮತ್ತೆ ಸಾವಿರಾರು ರೂಪಾಯಿಗಳನ್ನು ಪಾವತಿಸಬೇಕು ಎಂಬುದು ಯಾವುದೇ ಕಾರಣಕ್ಕೂ ಸರಿಯಲ್ಲ ಎಂದು ಕಂದಾಯ ಸಚಿವರ ಸಹಿತ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಹಾಗಾಗಿ ಅವರಿಗೂ ಸಹ ಮುಂದಿನ ಕೆಲವೇ ದಿನಗಳಲ್ಲಿ ಹಕ್ಕುಪತ್ರ ಸಿಗಲಿದ್ದು ಸುಮಾರು 40 ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಪರಿತಪಿಸುತ್ತಿರುವ ಬೆಂಗ್ರೆ ಪರಿಸರದ ಜನತೆಗೆ ಶೀಘ್ರದಲ್ಲಿ ಸಿಹಿಸುದ್ದಿ ಸಿಗಲಿದೆ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು.

ನಾಲ್ಕು ದಶಕಗಳಿಂದ ಹಕ್ಕುಪತ್ರಕ್ಕಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಿಯೂ ಶೂನ್ಯ ಫಲಿತಾಂಶದಿಂದ ಹತಾಶರಾಗಿದ್ದ ನಮಗೆ ಈ ಮೂಲಕ ಮತ್ತೊಮ್ಮೆ ಭರವಸೆ ಮೂಡಿದ್ದು ಇದಕ್ಕೆ ಕಾರಣೀಭೂತರಾದ ಶಾಸಕ ವೇದವ್ಯಾಸ ಕಾಮತರಿಗೆ ನಾವೆಂದೂ ಚಿರಋಣಿ ಎಂದು ಬೆಂಗ್ರೆ ಪರಿಸರ ಜನರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *