Connect with us

    LATEST NEWS

    ಜನರಿಗೆ ಹತ್ತಿರವಾದ ಮಂಗಳೂರು ಮೇಯರ್ ; ಫೋನ್‌ ಇನ್‌ ಗೆ ಸಾರ್ವಜನಿಕರ ಸ್ಪಂದನೆ..!

    ಸುಧೀರ್ ಶೆಟ್ಟಿ ಕಣ್ಣೂರು ಮಹಾನಗರ ಪಾಲಿಕೆ ಮೇಯರ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಜನರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಿದ್ದಾರೆ.

    ಮಂಗಳೂರು : ಸುಧೀರ್ ಶೆಟ್ಟಿ ಕಣ್ಣೂರು ಮಹಾನಗರ ಪಾಲಿಕೆ ಮೇಯರ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಜನರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಿದ್ದಾರೆ.

    ತನ್ನ ಚೊಚ್ಚಲ ಫೋನ್‌ಇನ್ ಕಾರ್ಯಕ್ರಮದಲ್ಲಿ ಮಂಗಳೂರು ನಾಗರಿಕರಿಂದ ದೂರುಗಳ ಮಹಾಪೂರವೇ ಹರಿದು ಬಂದಿದ್ದು, 23 ದೂರವಾಣಿ ಕರೆಗಳನ್ನು ಮೇಯರ್ ಸ್ವೀಕರಿಸಿ ಸ್ಪಂದಿಸುವ ಭರವಸೆ ನೀಡಿದರು.

    ಬಂದ ಕರೆಗಳಲ್ಲಿ ಹೆಚ್ಚಿನವು ನೀರು ಹಾಗೂ ರಸ್ತೆ ಸಮಸ್ಯೆ ಕುರಿತಂತೆ ಆಗಿದ್ದುವು. ಮಂಗಳೂರು ಜನ ಕಷ್ಟಗಳನ್ನು ಆಲಿಸಿದ ಮೇಯರ್ ಪ್ರತಿ ತಿಂಗಳು ಈ ಫೋನ್ ಇನ್ ಕಾರ್ಯಕ್ರಮ ನಡೆಸುವುದಾಗಿ ಘೋಷಿಸಿದ್ದಾರೆ.

    ನಗರದ ಹಲವೆಡೆ ಕ್ರಾಂಕ್ರೀಟೀಕರಣಗೊಂಡ ರಸ್ತೆಗಳ ಅಂಚುಗಳನ್ನು ಸಮತಟ್ಟುಗೊಳಿಸದಿರುವ ಕಾರಣ ದ್ವಿಚಕ್ರ ವಾಹನ ಸವಾರರಿಗೆ ಆಗುತ್ತಿರುವ ತೊಂದರೆಗಳು, ನಂತೂರು ಜಂಕ್ಷನ್‌ನಲ್ಲಿ ಸಂಚಾರ ಅಸ್ತವ್ಯಸ್ತವಾಗಿರುವ ಕುರಿತು, ನಗರದಲ್ಲಿ ಬೇಕಾಬಿಟ್ಟಿ ವಾಹಗಳನ್ನು ನಿಲ್ಲಿಸಿ ಪಾರ್ಕಿಂಗ್ ನಿಯಮ ಉಲ್ಲಂಘಿಸುವ ಬಗ್ಗೆ, ವಸತಿ ಸಮುಚ್ಛಯದ ಪಾರ್ಕಿಂಗ್ ಪ್ರದೇಶವನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವ ಬಗ್ಗೆ ಹೆಚ್ಚಿನ ದೂರುಗಳು ಬಂದಿದ್ದು ಕೆಲವನ್ನು ಅಧಿಕಾರಿಗಳಿಗೆ ಸರಿಪಡಿಸಲು ಸೂಚಿಸಿದರೆ ಮತ್ತೆ ಕೆಲವು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

    ಬೀದಿ ಬದಿ ವ್ಯಾಪಾರಸ್ಥರು ನಗರದ ಅನೇಕ ಕಡೆ ರಸ್ತೆ ಹಾಗೂ ಫುಟ್‌ಪಾತ್ ಅತಿಕ್ರಮಣ ನಡೆಸಿದ್ದಾರೆ. ಈ ಬಗ್ಗೆ ಪಾಲಿಕೆ ಕ್ರಮ ಕೈಗೊಳ್ಳಬೇಕು. ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿದೆಯೇ ಎನ್ನುವುದರ ಕುರಿತು ಮೇಲ್ವಿಚಾರಣೆ ನಡೆ ಸಲು ಸಾರ್ವಜನಿಕರು ಹಾಗೂ ತಜ್ಞರನ್ನು ಒಳಗೊಂಡ ಉಸ್ತುವಾರಿ ಸಮಿತಿ ರಚಿಸಬೇಕು ಎಂದು ಸಾಮಾಜಿಕ ಕಾರ್ಯ ಕರ್ತ ಜಿ.ಕೆ.ಭಟ್ ಮನವಿ ಮಾಡಿದರು.

    ವಾಮಂಜೂರಿನಲ್ಲಿ ನಿರ್ಮಿಸಲಾಗಿರುವ ಅಣಬೆ ಫ್ಯಾಕ್ಟರಿ ಹೊರಸೂಸುವ ತ್ಯಾಜ್ಯದಿಂದ ಪರಿಸರದಲ್ಲಿ ದುರ್ನಾತ ಹರಡಿದೆ. ಫ್ಯಾಕ್ಟರಿಗೆ ಬಂದು ಹೋಗುವ ಘನ ವಾಹನಗಳಿಂದ ಇಲ್ಲಿನ ರಸ್ತೆಗಳು ಹಾಳಾಗಿದ್ದು ಜೀವನವೇ ದುಸ್ತರವಾಗಿದ್ದ ಬಗ್ಗೆ ಬಂದ ದೂರಿಗೆ ಉತ್ತರಿಸಿದ ಮೇಯರ್ ಅಣಬೆ ಫ್ಯಾಕ್ಟರಿ ಯಾವ ರೀತಿ ಕಾರ್ಯನಿರ್ವಹಿಸಬೇಕು ಎನ್ನುವ ಕುರಿತು ಜಿಲ್ಲಾಧಿಕಾರಿಗಳು ಮಾರ್ಗಸೂಚಿ ಹೊರಡಿಸಿದ್ದಾರೆ.

    ಈ ಮಾರ್ಗಸೂಚಿ ಪಾಲನೆಯಾಗಿದೆಯೇ ಎಂದು ಪಾಲಿಕೆಯ ತಂಡ ಸ್ಥಳಕ್ಕೆ ಭೇಟಿ ನೀಡಿ ಬಳಿಕ ಜಿಲ್ಲಾಧಿಕಾರಿಗೆ ವರದಿ ನೀಡಲಿದೆ ಭರವಸೆ ನೀಡಿದರು.

    ಮಂಗಳೂರು ಮಹಾ ಜನತೆ ಪಡುವ ದೈನಂದಿನ ಬವಣೆ ಆಲಿಸಿದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಪ್ರತೀ ತಿಂಗಳು ಈ ಫೋನ್ ಇನ್ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುವುದಾಗಿ ಹೇಳಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *