Connect with us

    LATEST NEWS

    ಮಂಗಳೂರು ಕೋಡಿಕಲ್ ಮನೆಕಳ್ಳತನ ಭೇದಿಸಿದ ಉರ್ವಪೊಲೀಸರಿಂದ ಮೂವರ ಬಂಧನ, 4,64,750 ಮೌಲ್ಯದ ಚಿನ್ನಾಭರಣ ವಶ

    ಮಂಗಳೂರು : ನಗರ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್ ವಿವೇಕಾನಂದ ನಗರದಲ್ಲಿ ಜುಲೈ 6 ರಂದು ನಡೆದ ಮನೆ ಕಳ್ಳತನ ಪ್ರಕರಣವನ್ನು ಉರ್ವಾ ಪೊಲೀಸರು ಭೇದಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

    ವೆಂಕಟೇಶ್(21), ಸಾಗರ್ (21) , ರಂಜೀತ್ (20) ಬಂಧಿತ ಆರೋಪಿಗಳಾಗಿದ್ದು, , ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಳ ತಾಲೂಕು ಗಂಗೌಡನಹಳ್ಳಿ ಎಂಬಲ್ಲಿ ಆರೋಪಿಗಳನ್ನು ಬಂಧಿಸಿ ಕಳವು ಮಾಡಿದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.ವಶಪಡಿಕೊಂಡ ಚಿನ್ನಾಭರಣದ ಮೌಲ್ಯ ಸುಮಾರು 4,64,750/- ರೂ ಎಂದು ಅಂದಾಜಿಸಲಾಗಿದೆ. ಜೊತೆಗೆ ಕೃತ್ಯಕ್ಕೆ ಬಳಸಿದ ಕೆ.ಎ 41 ಇ ವೈ 2981 ನೇ ನಂಬ್ರದ ಸ್ಕೂಟರ್ ಅನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಪೋಲೀಸ್ ಆಯುಕ್ತರಾದ ಅನುಪಮ ಅಗರ್ ವಾಲ್ ರವರ ಆದೇಶದಂತೆ, ಉಪ ಪೊಲೀಸ್ ಆಯುಕ್ತರವರುಗಳಾದ ಸಿದ್ದಾರ್ಥ ಗೋಯಲ್, ಮತ್ತು ದಿನೇಶ್ ಕುಮಾರ್ ರವರ ನಿರ್ದೇಶನದಂತೆ ಸಹಾಯ ಪೊಲೀಸ್ ಆಯುಕ್ತರು ಪ್ರತಾಪ್ ಸಿಂಗ್ ತೋರಟ್ ರವರ ಮಾರ್ಗದಶನದಂತೆ ಉರ್ವಾ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀಮತಿ ಭಾರತಿ ರವರ ತಂಡ ಈ ಬಂಧನದ ಕಾರ್ಯಾಚರಣೆ ನಡೆಸಿದೆ. ಹರೀಶ್ ಹೆಚ್ ವಿ, ಪಿಎಸ್ಐ, ಅನಿತಾ ಹೆಚ್.ಬಿ, ಪಿ.ಎಸ್.ಐ, ವಿನಯ್ ಕುಮಾರ್ ಎಎಸ್ಐ, ಮತ್ತು ಸಿಬ್ಬಂದಿಗಳಾದ ಪುಷ್ಟರಾಜ್, ರಾಮಚಂದ್ರ, ಸತೀಶ್ ಹೆಚ್.ಕೆ, ಪ್ರಮೋದ್.ಕೆ, ವೆಂಕಟೇಶ್, ಅಭಿಷೇಕ್, ಬಾಸ್ಕರ್, ಯಲ್ಲಾಲಿಂಗ, ಮಮತಾ, ಚಂದ್ರಹಾಸ್, ಶರತ್ ಹಾಗೂ ನಗರ ಗಣಕಯಂತ್ರ ವಿಭಾಗದ ಸಿಬ್ಬಂದಿ ಮನೋಜ್ ರವರನ್ನೊಳಗೊಂಡ ತಂಡ ಆರೋಪಿ ದಸ್ತಗಿರಿ ಹಾಗೂ ಸ್ವತ್ತು ಪತ್ತೆ ಮಾಡುವಲ್ಲಿ ಸಹಕರಿಸಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *