Connect with us

LATEST NEWS

ಮಂಗಳೂರು ದಸರಾ ಮೆರವಣಿಗೆ: ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿದ ಪೊಲೀಸ್ ಇಲಾಖೆ

ಮಂಗಳೂರು: ಮಂಗಳೂರು ದಸರಾ ಮೆರವಣಿಗೆ ಕಾರಣ ವಾಹನ ದಟ್ಟಣೆ ತಪ್ಪಿಸಲು ನಗರದಲ್ಲಿ ವಾಹನ ಸಂಚಾರಕ್ಕೆ ಬದಲಿ ಮಾರ್ಗಗಳನ್ನು ಬಳಸಲು ಮಂಗಳೂರು ನಗರ ಪೊಲೀಸರು ಸೂಚಿಸಿದ್ದಾರೆ.

ಅ.13ರಂದು ಸಂಜೆ 4ಕ್ಕೆ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ನವದುರ್ಗೆಯರು, ಶಾರದೆ, ಗಣೇಶ ವಿಗ್ರಹ, ವಿವಿಧ ಟ್ಯಾಬ್‌ಗಳ ಶೋಭಾಯಾತ್ರೆಯು ನಡೆಯಲಿದ್ದು ಸಾವಿರಾರು ಜನ ಈ ಶೋಭಾಯಾತ್ರೆಯಲ್ಲಿ ಭಾಗವಹಿಲಿದ್ದಾರೆ.   ಹಾಗಾಗಿ ಅ.13ರ ಮಧ್ಯಾಹ್ನ 2ರಿಂದ ಅ.14ರಂದು ಬೆಳಗ್ಗೆ 6ರವರೆಗೆ ಸಾರ್ವಜನಿಕರ ಸುರಕ್ಷತೆ ಹಾಗೂ ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ಮಣ್ಣಗುಡ್ಡೆ ಬ್ರಹ್ಮಶ್ರೀ ನಾರಾಯಣಗುರು ವೃತ್ತ-ಲಾಲ್‌ಬಾಗ್-ಪಿವಿಎಸ್-ನವ ಭಾರತ್ ವೃತ್ತ- ಕೆಎಸ್‌ಆರ್ ರಸ್ತೆ-ಕೆ.ಬಿ. ಕಟ್ಟೆ ವೃತ್ತ-ಓಂ ಮಹಲ್ ಜಂಕ್ಷನ್-ಗಣಪತಿ ಹೈಸ್ಕೂಲ್ ರಸ್ತೆ-ಮೋಹಿನಿ ವಿಲಾಸ, ರಥಬೀದಿ-ಲೋವರ್ ಕಾರ್‌ಸ್ಟ್ರೀೀಟ್-ನ್ಯೂಚಿತ್ರಾ-ಅಳಕೆ-ಕುದ್ರೋಳಿ ದೇವಸ್ಥಾನದವರೆಗಿನ ರಸ್ತೆ ಬದಿ ವಾಹನ ಪಾಕಿರ್ಂಗ್ ಹಾಗೂ ಸಂಚಾರದಲ್ಲಿ ತಾತ್ಕಾಲಿಕವಾಗಿ ಮಾರ್ಪಾಡುಗೊಳಿಸಿ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಆದೇಶ ಹೊರಡಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *